Fri,Jun13,2025
ಕನ್ನಡ / English

ರಾಜ್ಯಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ : ಮೇಲ್ಮನೆಯಲ್ಲಿ ಮೊದಲ ಭಾರಿಗೆ ಬಹುಮತ ಸಾಧಿಸಿದ ಎನ್‌ಡಿಎ | JANATA NEWS

28 Aug 2024

ನವದೆಹಲಿ : ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 12 ಸದಸ್ಯರು ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮೇಲ್ಮನೆಯಲ್ಲಿ ಮೊದಲ ಭಾರಿಗೆ ಬಹುಮತವನ್ನು ಪಡೆದಿದೆ.

ಉಪಚುನಾವಣೆಯಿಂದ ಬಿಜೆಪಿಗೆ ಬಂದಿರುವ ಬಹುಮತವು ರಾಜ್ಯಸಭೆಯಲ್ಲಿ ವಿವಾದಾತ್ಮಕ ಮಸೂದೆಗಳ ಹಾದಿಯನ್ನು ಸುಗಮಗೊಳಿಸುತ್ತದೆ.

ರಾಜ್ಯಸಭೆ ಉಪಚುನಾವಣೆಯಲ್ಲಿ ಬಿಜೆಪಿ 9 ಸ್ಥಾನ ಗೆದ್ದಿದ್ದು, ಎನ್‌ಡಿಎ ಮಿತ್ರ ಪಕ್ಷಗಳಾದ ಎನ್‌ಸಿಪಿ(ಅಜಿತ್‌ ಪವಾರ್‌ ಬಣ) ಮತ್ತು ರಾಷ್ಟ್ರೀಯ ಲೋಕ ಮಂಚ್‌(ಆರ್.ಎಲ್.ಎಂ)ನ ತಲಾ ಒಬ್ಬರು ಕ್ರಮವಾಗಿ ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ತೆಲಂಗಾಣದಿಂದ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.

ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಹರಿಯಾಣ, ಅಸ್ಸಾಂ ಮತ್ತು ಮಹಾರಾಷ್ಟ್ರದ ರಾಜ್ಯಸಭಾ ಸ್ಥಾನಗಳನ್ನು ಸಂಪೂರ್ಣವಾಗಿ ಬಿಜೆಪಿ ಗೆದ್ದಿದೆ.

ಕೇಂದ್ರ ಸಚಿವರಾಗಿದ್ದ ಜಾರ್ಜ್‌ ಕುರಿಯನ್‌ (ಮಧ್ಯಪ್ರದೇಶದಿಂದ) ಮತ್ತು ರವನೀತ್‌ ಸಿಂಗ್‌ ಬಿಟ್ಟೂ (ರಾಜಸ್ಥಾನದಿಂದ) ಜೂನ್‌ನಲ್ಲಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಾಗ ಇಬ್ಬರೂ ಸಂಸದರಾಗಿರಲಿಲ್ಲ. ಮಂತ್ರಿಯಾದ 6 ತಿಂಗಳ ಒಳಗಡೆ ಸಂಸದರಾಗಬೇಕಾಗಿರುವ ಕಾರಣ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ.

ರಾಜ್ಯಸಭೆಯ 10 ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಆರ್‌ಎಸ್‌ನ ಕೇಶವ ರಾವ್‌ ಹಾಗೂ ಬಿಜೆಡಿಯ ಮಮತಾ ಮೊಹಾಂತ ಅವರು ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರುವ ಮುನ್ನ ರಾಜೀನಾಮೆ ನೀಡಿದ್ದರಿಂದ 12 ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.

ಈ ಮಧ್ಯೆ, ರಾಷ್ಟ್ರಪತಿಗಳ ಕೋಟಾದ 4 ನಾಮನಿರ್ದೇಶಿತ ಸ್ಥಾನಗಳು ಇನ್ನೂ ಖಾಲಿಯಿದ್ದು ಅದು ಎನ್‌ಡಿಎಗೆ ಹೋಗುತ್ತದೆ.

English summary :BJP landslide victory in Rajya Sabha by-elections: NDA wins majority in upper house for the first time

ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆಗುತ್ತಿದ್ದಾಗ ಏರ್ ಇಂಡಿಯಾ B787 ವಿಮಾನ ಪತನ : ಭಾರಿ ಸಾವುನೋವು ಸಾಧ್ಯತೆ
ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆಗುತ್ತಿದ್ದಾಗ ಏರ್ ಇಂಡಿಯಾ B787 ವಿಮಾನ ಪತನ : ಭಾರಿ ಸಾವುನೋವು ಸಾಧ್ಯತೆ
ಜಾತಿಗಣತಿ ನೆಪದಲ್ಲಿ ಸಿದ್ದರಾಮಯ್ಯ ₹165 ಕೋಟಿ ದುರುಪಯೋಗ ಮಾಡಿದ್ದಾರೆ - ಸುನೀಲಕುಮಾರ
ಜಾತಿಗಣತಿ ನೆಪದಲ್ಲಿ ಸಿದ್ದರಾಮಯ್ಯ ₹165 ಕೋಟಿ ದುರುಪಯೋಗ ಮಾಡಿದ್ದಾರೆ - ಸುನೀಲಕುಮಾರ
ಹಿಂದಿ ಕಲಿಯುವುದರಿಂದ ಉತ್ತರ ರಾಜ್ಯಗಳಲ್ಲಿ ಜನರಿಗೆ ಹೆಚ್ಚಿನ ಅನುಕೂಲ ಮತ್ತು ಅವಕಾಶ ಸಾಧ್ಯ - ಸಿಎಂ ಚಂದ್ರಬಾಬು ನಾಯ್ಡು
ಹಿಂದಿ ಕಲಿಯುವುದರಿಂದ ಉತ್ತರ ರಾಜ್ಯಗಳಲ್ಲಿ ಜನರಿಗೆ ಹೆಚ್ಚಿನ ಅನುಕೂಲ ಮತ್ತು ಅವಕಾಶ ಸಾಧ್ಯ - ಸಿಎಂ ಚಂದ್ರಬಾಬು ನಾಯ್ಡು
ಆಪರೇಷನ್ ಸಿಂಧೂರ್ : ವಿವಿಧ ದೇಶಗಳಿಗೆ ಭೇಟಿ ನೀಡಿದ ವಿವಿಧ ನಿಯೋಗಗಳ ಸದಸ್ಯರ ಆತಿಥ್ಯ ವಹಿಸಿದ ಪ್ರಧಾನಿ ಮೋದಿ
ಆಪರೇಷನ್ ಸಿಂಧೂರ್ : ವಿವಿಧ ದೇಶಗಳಿಗೆ ಭೇಟಿ ನೀಡಿದ ವಿವಿಧ ನಿಯೋಗಗಳ ಸದಸ್ಯರ ಆತಿಥ್ಯ ವಹಿಸಿದ ಪ್ರಧಾನಿ ಮೋದಿ
ಲಕ್ಷ್ಮಿ ಪುರಿ ಅವರ ಮಾನಹಾನಿಕರ ಪೋಸ್ಟ್‌ಗಳಿಗಾಗಿ ಬೇಷರತ್ ಕ್ಷಮೆಯಾಚಿಸಿದ ಟಿಎಂಸಿ ಸಂಸದ ಸಾಕೇತ್ ಗೋಖಲೆ
ಲಕ್ಷ್ಮಿ ಪುರಿ ಅವರ ಮಾನಹಾನಿಕರ ಪೋಸ್ಟ್‌ಗಳಿಗಾಗಿ ಬೇಷರತ್ ಕ್ಷಮೆಯಾಚಿಸಿದ ಟಿಎಂಸಿ ಸಂಸದ ಸಾಕೇತ್ ಗೋಖಲೆ
ಪ್ರಧಾನಿ ಮೋದಿ ಉದ್ಘಾಟಿಸಿದ ವಂದೇ ಭಾರತ್ ರೈಲು ಮತ್ತು ಚನಾಬ್ ಸೇತುವೆಯನ್ನು ಶ್ಲಾಘಿಸಿದ ಫಾರೂಕ್ ಅಬ್ದುಲ್ಲಾ
ಪ್ರಧಾನಿ ಮೋದಿ ಉದ್ಘಾಟಿಸಿದ ವಂದೇ ಭಾರತ್ ರೈಲು ಮತ್ತು ಚನಾಬ್ ಸೇತುವೆಯನ್ನು ಶ್ಲಾಘಿಸಿದ ಫಾರೂಕ್ ಅಬ್ದುಲ್ಲಾ
 ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಅಮೆರಿಕ ಮಧ್ಯವರ್ತಿಯಾಗಿಲ್ಲ, ಭಾರತಕ್ಕೆ ಆಗತ್ಯತೆ ಇರಲಿಲ್ಲ - ಶಶಿ ತರೂರ್
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಅಮೆರಿಕ ಮಧ್ಯವರ್ತಿಯಾಗಿಲ್ಲ, ಭಾರತಕ್ಕೆ ಆಗತ್ಯತೆ ಇರಲಿಲ್ಲ - ಶಶಿ ತರೂರ್
ದೇಶಭಕ್ತರಾಗಿರುವುದು ಅಷ್ಟು ಕಷ್ಟವೇ? - ಕಾಂಗ್ರೆಸ್ ನಾಯಕರಿಗೆ ಕಷ್ಟವಾದ ಸಲ್ಮಾನ್ ಖುರ್ಷಿದ್ ಪ್ರಶ್ನೆ
ದೇಶಭಕ್ತರಾಗಿರುವುದು ಅಷ್ಟು ಕಷ್ಟವೇ? - ಕಾಂಗ್ರೆಸ್ ನಾಯಕರಿಗೆ ಕಷ್ಟವಾದ ಸಲ್ಮಾನ್ ಖುರ್ಷಿದ್ ಪ್ರಶ್ನೆ
ಉದ್ಧಟತನ ತೋರಿ ಹೈಕೋರ್ಟ್ ಮೆಟ್ಟಲೇದ್ದ ತಮಿಳು ನಟ ಕಮಲ್ ಹಾಸನ್ ಗೆ ಹೈಕೋರ್ಟ್ ನಲ್ಲಿ ಭಾರಿ ಮುಖಭಂಗ
ಉದ್ಧಟತನ ತೋರಿ ಹೈಕೋರ್ಟ್ ಮೆಟ್ಟಲೇದ್ದ ತಮಿಳು ನಟ ಕಮಲ್ ಹಾಸನ್ ಗೆ ಹೈಕೋರ್ಟ್ ನಲ್ಲಿ ಭಾರಿ ಮುಖಭಂಗ
ಶರ್ಮಿಷ್ಠ ಪನೋಲಿ ಅವರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆ - ಬಾರ್ ಕೌನ್ಸಿಲ್ ಆಫ್ ಇಂಡಿಯಾ
ಶರ್ಮಿಷ್ಠ ಪನೋಲಿ ಅವರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆ - ಬಾರ್ ಕೌನ್ಸಿಲ್ ಆಫ್ ಇಂಡಿಯಾ
ನಾರ್ವೆ ಚೆಸ್ 2025 : ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್ ನನ್ನು ಸೋಲಿಸಿದ ಭಾರತದ ಗುಕೇಶ
ನಾರ್ವೆ ಚೆಸ್ 2025 : ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್ ನನ್ನು ಸೋಲಿಸಿದ ಭಾರತದ ಗುಕೇಶ
ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ಪಾಕಿಸ್ತಾನವನ್ನು ಎರಡು ಭಾಗಗಳಾಗಿಸಿ ಪಿಓಕೆ ಮರಳಿ ಪಡೆಯುತ್ತಿದ್ದರು - ತೆಲಂಗಾಣ ಸಿಎಂ
ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ಪಾಕಿಸ್ತಾನವನ್ನು ಎರಡು ಭಾಗಗಳಾಗಿಸಿ ಪಿಓಕೆ ಮರಳಿ ಪಡೆಯುತ್ತಿದ್ದರು - ತೆಲಂಗಾಣ ಸಿಎಂ

ನ್ಯೂಸ್ MORE NEWS...