Tue,Apr29,2025
ಕನ್ನಡ / English

ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು - ಸಿದ್ದರಾಮಯ್ಯಗೆ ಲೇವಡಿ ಮಾಡಿದ ಎಚ್.ಡಿ.ಕೆ | JANATA NEWS

27 Sep 2024
1845

ಬೆಂಗಳೂರು : ಸಿಬಿಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ ಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ನಿರ್ಧರಿಸಿದ್ದು, ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆಗೆ ಭಯಪಡುತ್ತಿದ್ದಾರೆ ಎಂಬಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ.

ಈ ಕುರಿತು ಹೇಳಿರುವ ಎಚ್.ಡಿ.ಕೆ ಅವರು, "ಶ್ರೀಮಾನ್ ಸಿದ್ದರಾಮಯ್ಯನವರೇ.. ನಿಮ್ಮ 'ಸಿದ್ವಿಲಾಸ'ಕ್ಕೆ ಉಘೇಉಘೇ ಎನ್ನಲೇಬೇಕು. "
"ಅಂದು: ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ!"
"ಇಂದು: ಮೂಡಾಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇsss ಗತಿ!!"

"Karma Hit back(ಕರ್ಮ ಹಿಟ್ಸ್ ಬ್ಯಾಕ್) ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯ ನವರೇ? ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. 'ಸಿದ್ದಾಪರಾದ' ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ. ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು.. ನಿಮಗೂ ಭಯವಿದೆsss!! ಅದೇ ಈ ನೆಲದ ಕಾನೂನಿನ ಶಕ್ತಿ.", ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ ನಡೆಸುವ ಸಾಧ್ಯತೆ ಹೆಚ್ಚಾಗಿತ್ತು, ಎಂದು ಹೇಳಲಾಗಿದೆ. ಆದ್ದರಿಂದ ಕಾನೂನಿನ ಕುಣಿಕೆಯಿಂದ ರಕ್ಷಣೆ ಪಡೆಯಲು ಸಿಎಂ ಸಿದ್ದರಾಮಯ್ಯನವರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಮೂಡಾ ಹಗರಣದ ಪರ ವಿರೋಧ ಆಲಿಸಿದ ಹೈ ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಶನ್ ಆದೇಶವನ್ನು ಎತ್ತಿ ಹಿಡಿದಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

English summary :You are not as brave as I thought - HDK mocked Siddaramaiah

ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳ ನಿಷೇಧ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಮಾಧ್ಯಮ ಚಾನೆಲ್‌ಗಳಿಗೆ ಸರ್ಕಾರ ಸೂಚನೆ
ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳ ನಿಷೇಧ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಮಾಧ್ಯಮ ಚಾನೆಲ್‌ಗಳಿಗೆ ಸರ್ಕಾರ ಸೂಚನೆ
ಭಯೋತ್ಪಾದಕರನ್ನು ಬಂದೂಕುಧಾರಿಗಳು ಎಂದು ಕರೆದ ಕೇರಳ ಕಾಂಗ್ರೆಸ್ : ವ್ಯಾಪಕ ಖಂಡನೆ
ಭಯೋತ್ಪಾದಕರನ್ನು ಬಂದೂಕುಧಾರಿಗಳು ಎಂದು ಕರೆದ ಕೇರಳ ಕಾಂಗ್ರೆಸ್ : ವ್ಯಾಪಕ ಖಂಡನೆ
ಬಹಳ ಕುತೂಹಲ ಕೆರಳಿಸಿದ್ದ  ವಕ್ಫ್ (ತಿದ್ದುಪಡಿ) ಮಸೂದೆ, 2025 ಸಂಸತ್ತಿನಲ್ಲಿ ಅಂಗೀಕಾರ
ಬಹಳ ಕುತೂಹಲ ಕೆರಳಿಸಿದ್ದ ವಕ್ಫ್ (ತಿದ್ದುಪಡಿ) ಮಸೂದೆ, 2025 ಸಂಸತ್ತಿನಲ್ಲಿ ಅಂಗೀಕಾರ
ಮುಸಲ್ಮಾನರ ಏಳಿಗೆಗಾಗಿ ಸಂವಿಧಾನ ಬದಲಾವಣೆ - ಡಿಸಿಎಂ ಡಿಕೆಎಸ್ ಹೇಳಿಕೆಯನ್ನು ಖಂಡಿಸಿದ ಬಿಜೆಪಿ
ಮುಸಲ್ಮಾನರ ಏಳಿಗೆಗಾಗಿ ಸಂವಿಧಾನ ಬದಲಾವಣೆ - ಡಿಸಿಎಂ ಡಿಕೆಎಸ್ ಹೇಳಿಕೆಯನ್ನು ಖಂಡಿಸಿದ ಬಿಜೆಪಿ
ಪೊಲೀಸ ಉನ್ನತ ಅಧಿಕಾರಿಗಳ ನಡವಳಿಕೆಯು ನಾಚಿಕೆಗೇಡಿನ ಸಂಗತಿ... ಡಿಎಂಕೆಯ ಕೈಗೊಂಬೆಗಳಾಗಿದ್ದಾರೆ - ಅಣ್ಣಾಮಲೈ
ಪೊಲೀಸ ಉನ್ನತ ಅಧಿಕಾರಿಗಳ ನಡವಳಿಕೆಯು ನಾಚಿಕೆಗೇಡಿನ ಸಂಗತಿ... ಡಿಎಂಕೆಯ ಕೈಗೊಂಬೆಗಳಾಗಿದ್ದಾರೆ - ಅಣ್ಣಾಮಲೈ
ಜಗತ್ತಿನ ಯಾವುದೇ ಭಯೋತ್ಪಾದಕ ದಾಳಿಯ ಬೇರು ಪಾಕಿಸ್ತಾನದಲ್ಲಿ - ಪ್ರಧಾನಿ ಮೋದಿ
ಜಗತ್ತಿನ ಯಾವುದೇ ಭಯೋತ್ಪಾದಕ ದಾಳಿಯ ಬೇರು ಪಾಕಿಸ್ತಾನದಲ್ಲಿ - ಪ್ರಧಾನಿ ಮೋದಿ
ಪಾಕ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರ ಹಿಂದಿರುಗಿಸಿದ ನಂತರ ಎಲ್ಲಾ ಕಾಶ್ಮೀರ ಸಮಸ್ಯೆ ಪರಿಹಾರ - ಜೈಶಂಕರ್
ಪಾಕ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರ ಹಿಂದಿರುಗಿಸಿದ ನಂತರ ಎಲ್ಲಾ ಕಾಶ್ಮೀರ ಸಮಸ್ಯೆ ಪರಿಹಾರ - ಜೈಶಂಕರ್
ಮರುಜನ್ಮ ಪಡೆದ ಸೌಜನ್ಯ ಕೇಸ್ ಗಲಾಟೆ : ಮುಸ್ಲಿಮರಿಗೆ ಶೇ 4 ಮೀಸಲಾತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ?
ಮರುಜನ್ಮ ಪಡೆದ ಸೌಜನ್ಯ ಕೇಸ್ ಗಲಾಟೆ : ಮುಸ್ಲಿಮರಿಗೆ ಶೇ 4 ಮೀಸಲಾತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ?
ಮೊದಲ ಬಾರಿಗೆ ಶಾಸಕಿ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ : ಸಂಜೆ ಯಮುನಾ ಘಾಟ್‌ನಲ್ಲಿ ಆರತಿ
ಮೊದಲ ಬಾರಿಗೆ ಶಾಸಕಿ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ : ಸಂಜೆ ಯಮುನಾ ಘಾಟ್‌ನಲ್ಲಿ ಆರತಿ
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ : ಭಯೋತ್ಪಾದಕರಿಗೆ ನಡುಕ ಹುಟ್ಟಿಸಿದ ಭಾರತೀಯ ಸೇನೆ ಧ್ವಜ ಮೆರವಣಿಗೆ | ಇಲ್ಲಿಯ ವರೆಗಿನ ಅಪ್ಡೇಟ್
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ : ಭಯೋತ್ಪಾದಕರಿಗೆ ನಡುಕ ಹುಟ್ಟಿಸಿದ ಭಾರತೀಯ ಸೇನೆ ಧ್ವಜ ಮೆರವಣಿಗೆ | ಇಲ್ಲಿಯ ವರೆಗಿನ ಅಪ್ಡೇಟ್
ನಾನು ಬಾಂಗ್ಲಾದೇಶವನ್ನು ಪ್ರಧಾನಿ ಮೋದಿಗೆ ಬಿಟ್ಟುಕೊಡುತ್ತೇನೆ - ಅಮೆರಿಕ ಅಧ್ಯಕ್ಷ ಟ್ರಂಪ್
ನಾನು ಬಾಂಗ್ಲಾದೇಶವನ್ನು ಪ್ರಧಾನಿ ಮೋದಿಗೆ ಬಿಟ್ಟುಕೊಡುತ್ತೇನೆ - ಅಮೆರಿಕ ಅಧ್ಯಕ್ಷ ಟ್ರಂಪ್
ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಳಕ್ಕೆ ಸಹಾಯಕಾರಿಯಾಗಿದ್ದ ನಮ್ಮ ಮೆಟ್ರೊ ದರ 50% ಹೆಚ್ಚಳ : ಹಿಂಪಡೆಯಲು ಆರ್. ಅಶೋಕ ಒತ್ತಾಯ
ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಳಕ್ಕೆ ಸಹಾಯಕಾರಿಯಾಗಿದ್ದ ನಮ್ಮ ಮೆಟ್ರೊ ದರ 50% ಹೆಚ್ಚಳ : ಹಿಂಪಡೆಯಲು ಆರ್. ಅಶೋಕ ಒತ್ತಾಯ

ನ್ಯೂಸ್ MORE NEWS...