ಮಹಾರಾಷ್ಟ್ರ : ನಾಳೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ದೇವೇಂದ್ರ ಫಡ್ನವೀಸ್ | JANATA NEWS
ಮುಂಬಯಿ : ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಸಂಜೆ 5.30 ಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ಘೋಷಿಸಿದ್ದು, ದಿನಗಳ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
ಪ್ರಕಟಣೆ ಬಂದ ಪತ್ರಿಕಾಗೋಷ್ಠಿಯು ಮಿತ್ರಪಕ್ಷಗಳ ನಡುವಿನ ಕೆಲವು ಹಾಸ್ಯ ಚುಟುಕುಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು, ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ವಿರುದ್ಧ ಲಘುವಾಗಿ ತರಾಟೆಗೆ ತೆಗೆದುಕೊಂಡರು.
ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸಿದ ಬಳಿಕ ಏಕನಾಥ್ ಶಿಂಧೆ ಅವರು ಈಗ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುತ್ತಾರೆಯೇ ಎಂಬ ಸುದ್ದಿಯನ್ನು ಸ್ಪಷ್ಟಪಡಿಸಲು ಶಿಂಧೆ ಅವರು ನಿರಾಕರಿಸಿದರು.
ಈ ಮಧ್ಯೆ ಮಾತನಾಡಿದ ಪವಾರ್ ಅವರು, ತಾವು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತ ಇವರ(ಶಿಂಧೆ) ಬಗ್ಗೆ ಗೊತ್ತಿಲ್ಲ, ಎಂದು ಹೇಳಲು ಮಧ್ಯಪ್ರವೇಶಿಸಿದಾಗ, ನಗುವನ್ನು ಎಬ್ಬಿಸುವಂತೆ ಮಾತನಾಡಿದ ಶಿಂಧೆ ಅವರು, "ದಾದಾ ಕೋ ಅನುಭವ್ ಹೈ, ಸುಬಹ್ ಭೀ ಲೆನೆ ಕಾ ಔರ್ ಶಾಮ್ ಕೋ ಭೀ ಲೆನೆ ಕಾ (ಅವರಿಗೆ ಬೆಳಿಗ್ಗೆ ಮತ್ತು ಸಂಜೆ ಪ್ರಮಾಣವಚನ ಸ್ವೀಕರಿಸಿದ ಅನುಭವವಿದೆ)." ಕೈ ಚಪ್ಪಾಳೆ ತಟ್ಟಿ ವ್ಯಂಗ್ಯವಾಡಿದರು.