Sun,Dec14,2025
ಕನ್ನಡ / English

ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಳಕ್ಕೆ ಸಹಾಯಕಾರಿಯಾಗಿದ್ದ ನಮ್ಮ ಮೆಟ್ರೊ ದರ 50% ಹೆಚ್ಚಳ : ಹಿಂಪಡೆಯಲು ಆರ್. ಅಶೋಕ ಒತ್ತಾಯ | JANATA NEWS

10 Feb 2025

ಬೆಂಗಳೂರು : ವಾಯು ಮಾಲಿನ್ಯ ತಡೆಗೆ ಹಾಗೂ ಸಾರ್ವಜನಿಕ ಸಾರಿಗೆ ಹೆಚ್ಚಳಕ್ಕೆ ಸಾಕಷ್ಟು ಸಹಾಯಕಾರಿಯಾಗಿದ್ದ, ನಮ್ಮ ಮೆಟ್ರೊ ಪ್ರಯಾಣ ದರವನ್ನು ಒಮ್ಮೆಲೇ 50% ಹಚ್ಚಿಸಿರುವ ನಿರ್ಧಾರದ ವಿರುದ್ಧ ಸಾಕಷ್ಟು ಜನಾಕ್ರೋಶ ವ್ಯಕ್ತವಾಗಿದೆ. ಪೆಟ್ರೋಲ್, ಡೀಸೆಲ್, ವಿದ್ಯುತ್ ದರ, ಹಾಲು, ಬಸ್ಸು ದರ ಏರಿಕೆಯ ಬಳಿಕ ಈಗ ನಮ್ಮ ಮೆಟ್ರೊ ದರವನ್ನೂ ಸಹ ಹೆಚ್ಚಿಸಿರುವುದು ಜನ ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಈ ನಿರ್ಧಾರವನ್ನು ಹಿಂಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, "ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮೆಟ್ರೋ ದರವನ್ನ ಏಕಾಏಕಿ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ."

"ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ. ಈ ಕೊಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತೇನೆ.", ಎಂದು ಆರ್. ಅಶೋಕ ಒತ್ತಾಯಿಸಿದ್ದಾರೆ.

English summary :50% increase in our metro fare, which helped in increasing the use of public transport: R. Ashoka insists

2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
 ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
 ಎಸ್ಐಆರ್, ಸಂಚಾರ ಸಾಥಿ -  ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಎಸ್ಐಆರ್, ಸಂಚಾರ ಸಾಥಿ - ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಎಸ್ಐಆರ್ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗ ಸಾಂವಿಧಾನಿಕ, ಶಾಸನಬದ್ಧ ಅಧಿಕಾರ ಹೊಂದಿದೆ - ಸರ್ವೋಚ್ಚ ನ್ಯಾಯಾಲಯ
ಎಸ್ಐಆರ್ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗ ಸಾಂವಿಧಾನಿಕ, ಶಾಸನಬದ್ಧ ಅಧಿಕಾರ ಹೊಂದಿದೆ - ಸರ್ವೋಚ್ಚ ನ್ಯಾಯಾಲಯ

ನ್ಯೂಸ್ MORE NEWS...