ಮುಸಲ್ಮಾನರ ಏಳಿಗೆಗಾಗಿ ಸಂವಿಧಾನ ಬದಲಾವಣೆ - ಡಿಸಿಎಂ ಡಿಕೆಎಸ್ ಹೇಳಿಕೆಯನ್ನು ಖಂಡಿಸಿದ ಬಿಜೆಪಿ | JANATA NEWS

ಬೆಂಗಳೂರು : ಸಂವಿಧಾನ ಬದಲಾವಣೆಯ ಕುರಿತು ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯದ ಡಿಸಿಎಂ ಆಗಿರುವ ಡಿಕೆ.ಶಿವಕುಮಾರ ಅವರ ಹೇಳಿಕೆ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಹಾಗೂ ಟೀಕೆಗ ಗುರಿಯಾಗಿದೆ.
ಖಾಸಗಿ ವಾಹಿನಿ ಯೊಂದರ ಸಂದರ್ಶನದಲ್ಲಿ, ಇತ್ತೀಚೆಗೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಧರ್ಮಾದಾರಿತ ಮೀಸಲಾತಿ ಕುರಿತು ಪ್ರಶ್ನಿಸುತ್ತಾ, ಧರ್ಮಾದಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಕೂಡ ಅವಕಾಶವಿಲ್ಲ ಅಲ್ಲವೇ, ಎಂಬ ಪ್ರಶ್ನೆಗೆ ಉತ್ತರಿಸಿತ್ತ ಮಾತನಾಡಿರುವ ಡಿಸಿಎಂ ಡಿಕೆ.ಶಿವಕುಮಾರ್ ಅವರು, "ಸಂವಿಧಾನ ಬದಲಾವಣೆ ಆಗಲಿದೆ", ಎಂದು ಹೇಳಿದ್ದಾರೆ.
ಸದಾ ಸಂವಿಧಾನ ರಕ್ಷಣೆ ಹೆಸರಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್ ಮುಖಂಡರು, ವಿಶೇಷವಾಗಿ ವಿರೋಧ ಪಕ್ಷದ ನಾಯಕ ಆಗಿರುವ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯಿಂದ ಸಾಕಷ್ಟು ಮುಜುಗರ ಎದುರಿಸುವಂತಾಗಿದೆ.
ರಾಜ್ಯ ವಿಧಾನಸಭೆಯಲ್ಲಿ ಈ ಹೇಳಿಕೆಯನ್ನು ಖಂಡಿಸಿ ವಿರೋಧಪಕ್ಷಗಳು ಕೋಲಾಹಲ ಸೃಷ್ಟಿಸಿದ್ದಲ್ಲದೇ, ಸಂಸತ್ತಿನಲ್ಲಿಯೂ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ಸಾಕಷ್ಟು ಟೀಕೆಗೆ ಗುರಿಯಾಗಿದೆ.
"ಮುಸಲ್ಮಾನರ ಹಿತಕ್ಕಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ನೀಡಿದ್ದಾಯ್ತು!! ಈಗ ಮುಸಲ್ಮಾನರ ಏಳಿಗೆಗಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ ಡಿಸಿಎಂ ಡಿಕೆ.ಶಿವಕುಮಾರ್ ಅವರು. ಕಾಂಗ್ರೆಸ್ ಓಲೈಕೆ ಹಾಗೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಾಳೆ ಭಾರತವನ್ನೇ ತುಂಡರಿಸುತ್ತದೆ ಎಂಬುದಕ್ಕೆ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಯೇ ಸಾಕ್ಷಿ.", ಎಂದು ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಮುಸಲ್ಮಾನರ ಹಿತಕ್ಕಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ನೀಡಿದ್ದಾಯ್ತು!! ಈಗ ಮುಸಲ್ಮಾನರ ಏಳಿಗೆಗಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ ಡಿಸಿಎಂ @DKShivakumar ಅವರು.
— BJP Karnataka (@BJP4Karnataka) March 24, 2025
ಕಾಂಗ್ರೆಸ್ ಓಲೈಕೆ ಹಾಗೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಾಳೆ ಭಾರತವನ್ನೇ ತುಂಡರಿಸುತ್ತದೆ ಎಂಬುದಕ್ಕೆ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಯೇ… pic.twitter.com/Y63TlLWPc4