Sun,Jul07,2024
ಕನ್ನಡ / English

ಮೈಸೂರು ಯುವ ದಸರಾ ಆರಂಭ: ಯುವ ದಸರಾ ಉದ್ಘಾಟನೆ ಮಾಡಿದ ಪಿವಿ ಸಿಂಧು | Janata news

01 Oct 2019
655

ಮೈಸೂರು : ದಸರಾ ಮಹೋತ್ಸವ ಪ್ರಯುಕ್ತ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1 ರಿಂದ 6 ರವರೆಗೆ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಉದ್ಘಾಟನೆ ಮಾಡಲು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮೈಸೂರಿಗೆ ಆಗಮಿಸಿದ್ದಾರೆ. ತಮ್ಮ ತಂದೆ-ತಾಯಿಯೊಂದಿಗೆ ಆಗಮಿಸಿರುವ ಸಿಂಧು ಅವರಿಗೆ ನಗರದ ರಾಡಿಷನ್ ಬ್ಲೂ ಹೊಟೇಲ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ ಮಾಡಲಾಯಿತು. ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿ ಹೂಗುಚ್ಛ ನೀಡಿ ಸಂಸದ ಪ್ರತಾಪ್ ಸಿಂಹ ಆಹ್ವಾನಿಸಿದ್ದಾರೆ.

ಯುವ ದಸರಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರತಿನಿತ್ಯ ಕಾರ್ಯಕ್ರಮವು ನಿಗದಿತ ಸಮಯಕ್ಕೆ ಅಂದರೆ ಸಂಜೆ 5.30ಕ್ಕೆ ಆರಂಭವಾಗಲಿದೆ ಹಾಗೂ ರಾತ್ರಿ 10.30ಕ್ಕೆ ಮುಗಿಯಲಿವೆ ಎಂದು ದಸರಾ ಉಪ ವಿಶೇಷಾಧಿಕಾರಿಯಾದ ಎಸ್ಪಿ ರಿಷ್ಯಂತ್‌ ತಿಳಿಸಿದರು.

ಮೊದಲನೇ ದಿನ ಕಲ್ಕತ್ತಾದ ಖ್ಯಾತ ಗಾಯಕಿ ರಾನು ಮಂಡಲ್‌ ಅವರು ಆಗಮಿಸಲಿದ್ದು, ಅವರಿಗೆ ಗೌರವ ಸಮರ್ಪಣೆ ಕೂಡ ನಡೆಯಲಿದೆ. ಬಾಲಿವುಡ್‌ ಗಾಯಕ ಗುರು ರಾಂಧವ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದರು.

ಈ ಬಾರಿ ಹಲವಾರು ಗಾಯಕರನ್ನು ಆಹ್ವಾನಿಸಿದ್ದು, ಬಾಲಿವುಡ್‌ ಗಾಯಕರಾದ ಮೋಹಿತ್‌ ಚೌಹಾಣ್‌, ಮನಾಲಿ ಠಾಕೂರ್‌, ಪ್ರೀತಮ್‌ ಚರ್ಕವರ್ತಿ ಹಾಗೂ ಮೈಸೂರು ಗಾಯಕಿ ಸಂಗೀತ ರವೀಂದ್ರನಾಥ್‌ ತಮ್ಮ ಗಾಯನದಿಂದ ಪ್ರೇಕ್ಷಕರ ಮನಗೆಲ್ಲಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹಲವಾರು ತಾರೆಯರು ಭಾಗಿಯಾಗುವರು.

ನಟರಾದ ದರ್ಶನ್‌, ರಕ್ಷಿತ್‌ ಶೆಟ್ಟಿ, ಸಾಧುಕೋಕಿಲ, ಶರಣ್‌, ಸೃಜನ್‌, ಡಾಲಿ ಧನಂಜಯ್‌, ವಶಿಷ್ಟ, ದಿಗಂತ್‌, ನಟಿಯರಾದ ಐಂದಿತಾ ರೈ, ಹರ್ಷಿಕಾ ಪೂಣಚ್ಚ, ಮಾನ್ವಿತಾ ಹರೀಶ್‌, ಚಂದನ್‌ ಶೆಟ್ಟಿಹಾಗೂ ಗಾಯಕ ಸಂಚಿತ್‌ ಹೆಗಡೆ ಕೂಡ ಯುವ ದಸರಾ ಕಾರ್ಯಕ್ರಮದಲ್ಲಿ ಯುವ ಮನಸ್ಸುಗಳನ್ನು ಸಂತಸಗೊಳಿಸಲು ಬರಲಿದ್ದಾರೆ ಎಂದು ಅವರು ವಿವರಿಸಿದರು.

English summary :badminton star PV Sindhu will inaugurate mysore yuva dasara

ಅಗ್ನಿವೀರ ಪರಿಹಾರ ಕುರಿತು ಸುಳ್ಳು : ರಾಹುಲ್ ಗಾಂಧಿ ಆಪಾದನೆಗೆ ಸ್ಪಷ್ಟೀಕರಣ ನೀಡಿದ ಭಾರತೀಯ ಸೇನೆ
ಅಗ್ನಿವೀರ ಪರಿಹಾರ ಕುರಿತು ಸುಳ್ಳು : ರಾಹುಲ್ ಗಾಂಧಿ ಆಪಾದನೆಗೆ ಸ್ಪಷ್ಟೀಕರಣ ನೀಡಿದ ಭಾರತೀಯ ಸೇನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಪರಿಗಣಿಸುವಂತೆ ಪ್ರಧಾನಿ ಮೋದಿ ಸ್ಪೀಕರ್ ಗೆ ಒತ್ತಾಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಪರಿಗಣಿಸುವಂತೆ ಪ್ರಧಾನಿ ಮೋದಿ ಸ್ಪೀಕರ್ ಗೆ ಒತ್ತಾಯ
ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ - ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡ ಕೃಷಿ ಮಂತ್ರಿ
ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ - ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡ ಕೃಷಿ ಮಂತ್ರಿ
ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು 24ಗಂಟೆ “ಹಿಂಸೆ, ದ್ವೇಷ ಮತ್ತು ಸುಳ್ಳು - ರಾಹುಲ್ ಗಾಂಧಿ
ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು 24ಗಂಟೆ “ಹಿಂಸೆ, ದ್ವೇಷ ಮತ್ತು ಸುಳ್ಳು - ರಾಹುಲ್ ಗಾಂಧಿ
ರಾಹುಲ್ ದ್ರಾವಿಡ್ ಕೊಡುಗೆಗಳಿಗಾಗಿ, ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಕ್ಕೆ ಭಾರತ ಅವರಿಗೆ ಕೃತಜ್ಞರಾಗಿರುತ್ತದೆ - ಪ್ರಧಾನಿ ಮೋದಿ
ರಾಹುಲ್ ದ್ರಾವಿಡ್ ಕೊಡುಗೆಗಳಿಗಾಗಿ, ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಕ್ಕೆ ಭಾರತ ಅವರಿಗೆ ಕೃತಜ್ಞರಾಗಿರುತ್ತದೆ - ಪ್ರಧಾನಿ ಮೋದಿ
ಅಜೇಯ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ  ಪ್ರಧಾನಿ ಮೋದಿ
ಅಜೇಯ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ  ಮತ್ತೊಮ್ಮೆ ತಲೆನೋವು?
ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ ಮತ್ತೊಮ್ಮೆ ತಲೆನೋವು?
ಕುಸಿದ ಮೇಲ್ಛಾವಣಿ ರಚನೆಯನ್ನು 2009 ರಲ್ಲಿ ಮತ್ತೊಂದು ಕಂಪನಿ ನಿರ್ಮಿಸಿದೆ - ಎಲ್ ಅಂಡ್ ಟಿ
ಕುಸಿದ ಮೇಲ್ಛಾವಣಿ ರಚನೆಯನ್ನು 2009 ರಲ್ಲಿ ಮತ್ತೊಂದು ಕಂಪನಿ ನಿರ್ಮಿಸಿದೆ - ಎಲ್ ಅಂಡ್ ಟಿ
ಕುಸಿದ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಮೋದಿ ಹೊಣೆ ಮಾಡಲು ಹೊರಟ ವಿಪಕ್ಷ : 2009ರಲ್ಲಿ ಉದ್ಘಾಟಿಸದ್ದು - ವಿಮಾನಯಾನ ಮಂತ್ರಿ
ಕುಸಿದ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಮೋದಿ ಹೊಣೆ ಮಾಡಲು ಹೊರಟ ವಿಪಕ್ಷ : 2009ರಲ್ಲಿ ಉದ್ಘಾಟಿಸದ್ದು - ವಿಮಾನಯಾನ ಮಂತ್ರಿ
ದೊಡ್ಡ ಆರ್ಥಿಕ, ಕೃಷಿ, ಇವಿಎಂ, ಕಾಶ್ಮೀರ, ತುರ್ತು ಪರಿಸ್ಥಿತಿ : ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ
ದೊಡ್ಡ ಆರ್ಥಿಕ, ಕೃಷಿ, ಇವಿಎಂ, ಕಾಶ್ಮೀರ, ತುರ್ತು ಪರಿಸ್ಥಿತಿ : ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ
ಲೋಕಸಭೆಯಿಂದ ಪವಿತ್ರ ಸೆಂಗೊಲ್ ತೆಗೆದು ಹಾಕಲು ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಪ್ರತಿಪಕ್ಷ
ಲೋಕಸಭೆಯಿಂದ ಪವಿತ್ರ ಸೆಂಗೊಲ್ ತೆಗೆದು ಹಾಕಲು ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಪ್ರತಿಪಕ್ಷ
ತುರ್ತು ಪರಿಸ್ಥಿತಿಯನ್ನು ಹೇರುವ ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿದ ಸ್ಪೀಕರ್ ಬಿರ್ಲಾ
ತುರ್ತು ಪರಿಸ್ಥಿತಿಯನ್ನು ಹೇರುವ ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿದ ಸ್ಪೀಕರ್ ಬಿರ್ಲಾ

ನ್ಯೂಸ್ MORE NEWS...