ಸಂಜನಾರನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ: ದಾಖಲಾಯ್ತು ಹೊಸ ದೂರು | Filmz news
: ಮೂಲತಃ ಹಿಂದೂ ಧರ್ಮದವರಾಗಿರುವ ನಟಿ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಸಂಜನಾರನ್ನ ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಂಡಿದ್ದ ಮೌಲ್ವಿ ವಿರುದ್ಧ ಕಾಟನ್ಪೇಟೆ ಠಾಣೆಗೆ ದೂರು ನೀಡಲಾಗಿದೆ. ಟ್ಯಾನರಿ ರೋಡ್ನ ದಾರುಲ್ ಉಲುಮ್ ಶಾ ವಲಿಯುಲ್ಲಾದ ಮೌಲ್ವಿಯೊಬ್ಬರ ವಿರುದ್ಧ ವಕೀಲ ಅಮೃತೇಶ್ ಕಾಟನ್ಪೇಟೆ ಠಾಣೆಗೆ ದೂರು ನೀಡಿದ್ದಾರೆ.
ನಟಿ ಸಂಜನಾರನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಕಾಟನ್ಪೇಟೆ ಠಾಣೆಗೆ ನೀಡಿರುವ ದೂರಿನಲ್ಲಿ ವಕೀಲ ಆರೋಪಿಸಿದ್ದಾರೆ.
ಸಂಜನಾ ಗಲ್ರಾನಿಯವರನ್ನು ಬಲವಂತವಾಗಿ ಮತಾಂತರ ಮಾಡಿಕೊಳ್ಳಲಾಗಿತ್ತು. ಒತ್ತಾಯ ಪೂರ್ವಕವಾಗಿ ಆಕೆಗೆ ಮಹಿರಾ ಹೆಸರನ್ನು ಮರುನಾಮಕರಣ ಮಾಡಲಾಗಿತ್ತು. ಬೆಂಗಳೂರಿನ ಟ್ಯಾನರಿ ರಸ್ತೆಯ ದಾರುಲ್ ಉಲಮ್ ಶಾ ವಲಿಲುಲ್ಲಾ ಹೆಸರಿನ ಮೌಲ್ವಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿಕೊಂಡಿದ್ದರು ಎಂದು ದೂರು ದಾಖಲಿಸಲಾಗಿದೆ.
English summary :Sanjana Galrani