CCB ತನಿಖಾಧಿಕಾರಿಗಳ ಮುಂದೆ ನಟಿ ಸಂಜನಾ ಗಲ್ರಾನಿ ಹಾಜರ್ | Filmz news
: ಜಾಮೀನು ಪಡೆದ ಬಳಿಕ ಕೋರ್ಟ್ ಸೂಚನೆಯಂತೆ ಇಂದು ನಟಿ ಸಂಜನಾ ಗಲ್ರಾನಿ ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಹಾಜರಾದರು.
ಡ್ರಗ್ಸ್ ಕೇಸ್ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂಜನಾ ಅನಾರೋಗ್ಯ ಹಿನ್ನೆಲೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು.
15 ದಿನಕ್ಕೊಮ್ಮೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸಂಜನಾಗೆ ನ್ಯಾಯಾಲಯ ತಾಕೀತು ಮಾಡಿತ್ತು. ಈ ಹಿನ್ನೆಲೆ ಸಂಜನಾ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಒಳಗಾಗಿದ್ದಾರೆ.
English summary :Sanjana Galrani