ನಟಿ ಸಂಜನಾ ಗಲ್ರಾನಿಗೂ ಕೊರೊನಾ ಪಾಸಿಟಿವ್! | Filmz news
: ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಎರಡೆರಡು ಸಲ ಲಸಿಕೆ ಪಡೆದಿದ್ದ ಅವರ ಪತಿಗೂ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದೀಗ ಇಬ್ಬರೂ ಹೋಮ್ ಕ್ಯಾರಂಟೈನ್ ಆಗಿದ್ದಾರೆ.
ಈ ಕುರಿತು ನಟಿ ಕೊರೊನಾ ಟೆಸ್ಟ್ ಮಾಡಿಸಿರುವ ವೀಡಿಯೋವನ್ನು ಇನ್ ಸ್ಟಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ.
ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನನ್ನ ಕುಟುಂಬದಲ್ಲಿಯೇ ವೈದ್ಯರು ಇದ್ದಾರೆ. ಅವರು ಕೊರೊನಾ ವಾರಿಯರ್ ಆಗಿದ್ದು, ಅವರು ಸಮಾಜಕ್ಕೆ ತಮ್ಮ ಸೇವೆ ನೀಡಲೇಬೇಕು. ನೀವು ಮನೆ ಬಿಟ್ಟು ಹೋಗಬೇಡಿ, ಸಮಾಜಸೇವೆ ಮಾಡಬೇಡಿ. ನಿಮ್ಮ ಸುರಕ್ಷತೆ ನೋಡಿಕೊಳ್ಳಿ ಅಂತ ನಾನು ಅವರಿಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಸ್ವಲ್ಪ ಕೆಮ್ಮು ಇದೆ ಎಂದು ನಟಿ ಬರೆದುಕೊಂಡಿದ್ದಾರೆ.
ಅಲ್ಲದೆ ದೀರ್ಘಕಾಲದಿಂದ ತಮಗೆ ಉಬ್ಬಸದ ಸಮಸ್ಯೆ ಇರುವುದನ್ನೂ ಅವರು ತಿಳಿಸಿದ್ದಾರೆ. ನಾನು ಏಳನೇ ತರಗತಿಯಲ್ಲಿ ಇದ್ದಾಗಲೇ ಉಬ್ಬಸ ಕಂಡುಬಂದಿದ್ದು, ವರ್ಷವಿಡೀ ವೀಜಿಂಗ್ ಪಂಪ್ ಬಳಸುತ್ತಿರುತ್ತೇನೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇನ್ನು ಈ ಕ್ವಾರಂಟೈನ್ ಪೂರ್ತಿ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುವುದಾಗಿ ಹೇಳಿರುವ ಅವರು, ಇತರರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.