ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ರಾಜಾರಾಂ ಇನ್ನಿಲ್ಲ | Filmz news
: ಕನ್ನಡ ಚಿತ್ರರಂಗದಲ್ಲಿ ಹಿರಿಯ ಹಾಸ್ಯ ನಟ ಎಂದೇ ಗುರ್ತಿಸಿಕೊಂಡಿದ್ದಂತ ನಟ ರಾಜಾರಾಂ(82) ಇಂದು ನಿಧನರಾಗಿದ್ದಾರೆ.
ಕನ್ನಡದ ಹಿರಿಯ ಕಲಾವಿಧ, ಸಿನಿಮಾ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನಟರಾಗಿ ಗುರ್ತಿಸಿಕೊಂಡಿದ್ದಂತ ಹಿರಿಯ ಹಾಸ್ಯನಟ ರಾಜಾರಾಂ, ಇಂದು ನಿಧನರಾಗಿದ್ದಾರೆ. ಕನ್ನಡ ವಿವಿಧ ಚಿತ್ರಗಳಲ್ಲಿ ಅಭಿನಯಿಸಿದ್ದಂತ ಹಿರಿಯ ಹಾಸ್ಯನಟ ರಾಜಾರಾಂ ಇನ್ನಿಲ್ಲವಾಗಿದ್ದಾರೆ.
ರಾಜಾರಾಮ್ ಅವರಿಗೆ ವಯಸ್ಸಾಗಿತ್ತು. ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಹೀಗಾಗಿ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಇಂದು (ಮೇ 10) ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರವನ್ನು ನಟ ಸೃಜನ್ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ. ರಾಜಾರಾಮ್ ಅಂಕಲ್ ನೀವು ನಮ್ಮನ್ನು ಬಿಟ್ಟು ತೆರಳಿರುವುದು ನಿಜಕ್ಕೂ ಬೇಸರವಾಗುತ್ತಿದೆ. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಶಂಖನಾದ ಅರವಿಂದ್, ರೇಣುಕಾ ಶರ್ಮಾ, ರಾಮು ಸೇರಿದಂತೆ ಹಲವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಈಗ ಹಿರಿಯ ನಟ ರಾಜಾರಾಂ ಅವರು ನಿಧನ ಹೊಂದಿದ್ದಾರೆ. 84 ವರ್ಷದ ಹಿರಿಯ ಕಲಾವಿದ ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಿಂತ ಹೆಚ್ಚಾಗಿ ರಾಜಾರಾಂ ಅವರು ರಂಗಭೂಮಿಯಲ್ಲೇ ಸಕ್ರಿಯವಾಗಿದ್ದರು. 1971ರಿಂದ ಇಲ್ಲಿಯವರೆಗೆ 62 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.