ಮಾಸ್ಕ್ ಧರಿಸಿ ಹಸೆಮಣೆ ಏರಿದ ಚಂದನ್ ಕುಮಾರ್-ಕವಿತಾ ಗೌಡ | Filmz news
: ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಲಾಕ್‌ಡೌನ್ ಮಧ್ಯೆಯೇ ಕೊವಿಡ್ ನಿಯಮ ಪಾಲಿಸಿ ಹಸೆಮಣೆ ಏರಿದ್ದಾರೆ.
ಶುಕ್ರವಾರ (ಮೇ 14) ಚಂದನ್ ಮತ್ತು ಕವಿತಾ ಗೌಡ ಅವರ ವಿವಾಹವು ತುಂಬ ಸರಳವಾಗಿ ನಡೆದಿದೆ. ನೂತನ ದಂಪತಿಗಳು ಮಾಸ್ಕ್ ಧರಿಸಿಯೇ ಮದುವೆಯಲ್ಲಿ ಭಾಗಿಯಾಗಿದ್ದು ವಿಶೇಷ. ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ.
ಕೊರೊನಾ ಲಾಕ್‌ಡೌನ್ ಇರುವುರಿಂದ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ, ನಿಯಮದಂತೆ ಚಂದನ್-ಕವಿತಾ ಜೋಡಿ ಮದುವೆ ಆಗಿದೆ. ಹಸೆಮಣೆ ಏರುವಾಗ ಅವರು ಮಾಸ್ಕ ಧರಿಸಿದ್ದು ವಿಶೇಷವಾಗಿತ್ತು.
ಏಪ್ರಿಲ್ ಒಂದರಂದು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು. ಹೊಸ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬಂದಿದೆ.
English summary :Chandan Kumar And Kavitha Gowda Got Married In Bengaluru