ಕಪಿಲ್ ದೇವ್ ಜೊತೆ ಫೋಟೋ ತೆಗೆಸಿಕೊಳ್ಳಲು 36 ವರ್ಷ ಕಾದಿದ್ರಂತೆ ಸುದೀಪ್ | Filmz news
: ಕಪಿಲ್ ದೇವ್ ಎಂದರೆ ಸುದೀಪ್ ಅವರಿಗೆ ಸಖತ್ ಅಭಿಮಾನ. ಅವರ ಜತೆ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಬಾಲ್ಯದಲ್ಲೇ ಸುದೀಪ್ ಅವರ ಮನದಲ್ಲಿ ಚಿಗುರಿತ್ತು. ಆದರೆ ಸಾಧ್ಯವಾಗಿರಲಿಲ್ಲ, 36 ವರ್ಷಗಳ ಬಳಿಕ ಆ ಕ್ಷಣ ಬಂತು ಎಂದು ಸುದೀಪ್ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಕನ್ನಡ ವರ್ಷನ್ ಅನ್ನು ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ 83 ತಂಡ ಹಾಗೂ ಕಿಚ್ಚ ಸುದೀಪ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಸುದೀಪ್, ಒಂದು ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡರು. ನಾನಿನ್ನೂ ಆಗ ತುಂಬ ಚಿಕ್ಕವನು. ಕಪಿಲ್ ದೇವ್ ಅವರನ್ನು ನೋಡಬೇಕು ಎಂದು ತುಂಬ ಆಸೆ ಇಟ್ಟುಕೊಂಡಿದ್ದೆ. ಭಾರತ ತಂಡ ಒಮ್ಮೆ ಬೆಂಗಳೂರಿನ ವೆಸ್ಟ್ಎಂಡ್ ಹೋಟೆಲ್ನಲ್ಲಿ ತಂಗಿತ್ತು. ಆ ದಿನ ನಾನು ಕಪಿಲ್ ದೇವ್ ಅವರನ್ನು ನೋಡಬೇಕೆಂದು ಅಲ್ಲಿಗೆ ಹೋಗಿದ್ದೆ. ಅಲ್ಲಿ ಕಪಿಲ್ ದೇವ್ ಅವರು ಒಬ್ಬರೇ ವಾಕಿಂಗ್ ಮಾಡುತ್ತಿದ್ದರು.
ಹಿಂದಿನಿಂದ ಹೋಗಿ ಅವರ ಕೋಟ್ ಎಳೆದುಬಿಟ್ಟಿದ್ದೆ. ನನ್ನ ಜೊತೆ ನನ್ನ ಅಕ್ಕ ಕೂಡ ಬಂದಿದ್ದಳು. ಕಪಿಲ್ ಅವರ ಜೊತೆ ಫೋಟೋ ತೆಗಿಸಿಕೊಳ್ಳಬೇಕಿತ್ತು. ನಮ್ಮ ಬಳಿ ಒಂದು ಸಣ್ಣ ಕ್ಯಾಮೆರಾ ಕೂಡ ಇತ್ತು. ಇನ್ನೇನು ಫೋಟೋ ತೆಗೆಯಬೇಕು ಎನ್ನುವಷ್ಟರಲ್ಲಿ ಆ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ. ಆ ಕ್ಷಣ ನಾನು ಅಳುವುದಕ್ಕೆ ಶುರು ಮಾಡಿದೆ. ನಂತರ ನನ್ನನ್ನು ಕಪಿಲ್ ಅವರು ಎತ್ತಿಕೊಂಡು ಸಮಾಧಾನ ಮಾಡಿದರು ಎಂದು ಹಳೆಯ ನೆನಪನ್ನು ಸುದೀಪ್ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್ ಜೊತೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಾಗಿ 36 ವರ್ಷಗಳಿಂದ ಕಾಯುತ್ತಿದ್ದೇನೆ. ಇದನ್ನು ನನಸು ಮಾಡಿದ್ದಕ್ಕೆ ಕಪಿಲ್ ದೇವ್ ಧನ್ಯವಾದ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.