ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ ಗರ್ಲಾನಿ | Filmz news
: ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಹೊಸ ವರ್ಷಕ್ಕೆ ತಮ್ಮ ಫ್ಯಾನ್ಸ್ಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ತಾವು ತಾಯಿ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿ, ಈ ವರ್ಷ ಮೇ ತಿಂಗಳಿನಲ್ಲಿ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಲಿದ್ದಾರೆ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ ಎನ್ನಲಾಗಿದೆ.
ಸಂಜನಾ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡ ನಂತರ ಅವರು ನಗರದ ಖ್ಯಾತ ಖಾಸಗಿ ಆಸ್ಪತ್ರೆಯ ವೈದ್ಯ ಅಜೀಜ್ ಪಾಷ ಅವರನ್ನು ಮದುವೆಯಾಗಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಜನಾ ತಾವು ಅಜೀಜ್ ಪಾಷ ಅವರನ್ನು ಮದುವೆಯಾಗಿರುವ ವಿಚಾರವನ್ನು ಅಧಿಕೃತವಾಗಿ ರಿವೀಲ್ ಮಾಡಿದ್ರು.
English summary :Actress Sanjana Garlani is expecting her first child