ಕಿಚ್ಚನನ್ನು ಬೆಸ್ಟಿ ಎಂದ ಮೋಹಕ ತಾರೆ! | Filmz news
: ಸಂದರ್ಶನವೊಂದರಲ್ಲಿ ರಮ್ಯಾ ಮತ್ತು ಸುದೀಪ್ ತಮ್ಮ ನಡುವೆ ನಡೆದ ಜಗಳದ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.
ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಕಿಚ್ಚ ಹುಚ್ಚ, ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಜೋಡಿಯಾಗಿ ತೆರೆಯ ಮೇಲೆ ಮೋಡಿ ಮಾಡಿದ್ದಾರೆ. ಹೀಗಿರುವಾಗ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಜಗಳದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಾವು ಜಗಳ ಮಾಡ್ತಿದ್ರೆ, ಶೂಟಿಂಗ್ ಸೆಟ್‍ನಲ್ಲಿ ಇದ್ದವರು ಬಿದ್ದು ಬಿದ್ದು ನಕ್ತಾ ಇದ್ದರು. ನಮ್ಮ ಸಿನಿಮಾ ಕಾಮಿಡಿಗಿಂತ, ನಮ್ಮ ಜಗಳ ನೋಡಿಯೇ ಮಜಾ ತೆಗೆದುಕೊಳ್ತಾ ಇದ್ರು ಎಂದು ಸುದೀಪ್ ರಮ್ಯಾಗೆ ರೇಗಿಸಿದ್ದಾರೆ.
ಸುದೀಪ್‍ಗೆ ರಮ್ಯಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀನೇ ಯಾವಾಗಲೂ ಜಗಳ ಮಾಡೋದು, ನೀನು ನನಗಿಂತ ದೊಡ್ಡವನು. ನೀನು ಯಾವ ನಟಿ ಜೊತೆನೂ ಜಗಳ ಮಾಡಲ್ಲ. ನನ್ನ ಜೊತೆ ಜಗಳ ಮಾಡ್ತಿದ್ದೆ ಎಂದು ರಮ್ಯಾ ಹೇಳಿದ್ದಾರೆ.
ಜಗಳ ಯಾರು ಮಾಡಿದ್ದು ಎಂದು ಸುದೀಪ್ ರಮ್ಯಾ ಅವರನ್ನು ಕೇಳಿದ್ದಾರೆ. ನೀನೇ ಎಂದು ರಮ್ಯಾ ಅವರು ಹೇಳಿದ್ದಾರೆ. ಈ ಮೂಲಕ ಸುದೀಪ್ ಜೊತೆಗಿನ ಹಳೆಯ ವಿಡಿಯೋ ಶೇರ್ ಮಾಡುವ ಮೂಲಕ ರಮ್ಯಾ ಅವರು ಮೆಲುಕು ಹಾಕಿದ್ದಾರೆ. ಜೊತೆಗೆ ನೀವು ಸ್ವೀಟೆಸ್ಟ್ ಅಂಡ್ ಬೆಸ್ಟಿ ಎಂದು ರಮ್ಯಾ ಹೇಳಿದ್ದಾರೆ.