ಭಾರತದಲ್ಲಿ ಕೊರೋನಾ ಅಬ್ಬರ: 24 ಗಂಟೆಗಳಲ್ಲಿ 2,59,170 ಹೊಸ ಕೊವಿಡ್ ಪ್ರಕರಣ ಪತ್ತೆ, 1,761 ಸಾವು | ಜನತಾ ನ್ಯೂಸ್
ನವದೆಹಲಿ: : ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 1.53 ಕೋಟಿ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 2,59,170 ಮಂದಿಗೆ ಸೋಂಕು ಹರಡಿದ್ದು, ಮಹಾಮಾರಿಗೆ 1761 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿರುವ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ ಪ್ರಕರಣಗಳ ಸಂಖ್ಯೆ 1,53,21,089 ಆಗಿದೆ. ಈವರೆಗೆ 1,80,530 ಮಂದಿ ಮೃತಪಟ್ಟಿದ್ದು 1,31,08,582 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,31,977 ಆಗಿದ್ದು, 12,71,29,113 ಮಂದಿ ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಮಾಹಿತಿ:-
ಮಹಾರಾಷ್ಟ್ರದಲ್ಲಿ- 6,78,198
ಉತ್ತರ ಪ್ರದೇಶದಲ್ಲಿ- 2,08,523
ಕರ್ನಾಟಕದಲ್ಲಿ- 1,42,103
ಕೇರಳದಲ್ಲಿ- 1,03,327
ಛತ್ತೀಸ್ಗಡದಲ್ಲಿ- 1,29,000
ತಮಿಳುನಾಡಿನಲ್ಲಿ- 75,116
English summary :Coronavirus India Update