ನಾದಿನಿಯನ್ನು ಕಿಡ್ನಾಪ್ ಮಾಡಿದ ಬಾವ! | ಜನತಾ ನ್ಯೂಸ್
ಬೆಂಗಳೂರು : ಮದುವೆ ಆಗುವಂತೆ ಒತ್ತಾಯಿಸಿ ಬಾವನೆ ನಾದಿನಿಯನ್ನ ಅಪಹರಣ ಮಾಡಿದ ಘಟನೆ ಬೆಂಗಳೂರಿನ ಕೊಡುಗೆಹಳ್ಳಿಯಲ್ಲಿ ನಡೆದಿದೆ.
ದೇವರಾಜ್, ನವೀನ್, ಕುಮಾರ್ ಬಂಧಿತ ಆರೋಪಿಗಳು. ದೇವರಾಜ್ ಅಪಹರಿಸಿದ ಮಹಿಳೆಯ ಅಕ್ಕನನ್ನು ಮದುವೆಯಾಗಿದ್ದ. ನಂತರ ತಂಗಿಯನ್ನು ಪ್ರೀತಿಸಿ ಮದುವೆ ಆಗುವಂತೆ ಒತ್ತಾಯಿಸಿದ್ದ. ಆದರೆ ನಾದಿನಿಯು ಬಾವನ ಪ್ರೀತಿಯನ್ನು ನಿರಾಕರಿಸಿದ್ದಳು.
ಈ ಹಿನ್ನೆಲೆಯಲ್ಲಿ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
English summary :Kidnapping in Bangalore, 3 are arrested