logo logo logo logo

ವಿದ್ಯುತ್‌ ತಂತಿ ತುಳಿದು ತಾಯಿ- ಮಗಳು ಸಾವು: 5 ಬೆಸ್ಕಾಂ ಅಧಿಕಾರಿಗಳ ಅಮಾನತು | JANATA NEWS

Mother and daughter died in electrical accident: BESCOM suspends 5 officials

ಬೆಂಗಳೂರು : ಬೆಸ್ಕಾಂ ವೈಟ್‌ ಫೀಲ್ಡ್‌ ವಿಭಾಗ ವ್ತಾಪ್ತಿಯ ಕಾಡುಗೋಡಿಯ 4 ನೇ ಪೂರ್ವ ಉಪ ವಿಭಾಗದ ಕಾಡುಗೋಡಿ ಹೋಪ್‌ ಫಾರ್ಮ್‌ ಸಿಗ್ನಲ್‌ ಸಮೀಪ ಪಾದಚಾರಿ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ 11ಕೆವಿ ವಿದ್ಯುತ್‌ ತಂತಿ ತುಳಿದು ತಾಯಿ-ಮಗಳು ಮೃತ ಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡ ಬಂದ ಹಿನ್ನೆಲೆಯಲ್ಲಿ ಬೆಸ್ಕಾಂನ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಇಬ್ಬರು ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ.

ಭಾನುವಾರ ಬೆಳಗ್ಗೆ 5.30 ರ ಸಮಯದಲ್ಲಿ ಸೌಂದರ್ಯ ( 23 ) ಅವರ ಮಗಳು ಲೀಲಾ ಅವರು ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಸ್ಥಳದಲ್ಲೇ ಮೃತ ಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ವೈಟ್‌ ಫೀಲ್ಡ್‌ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂಧನ ಸಚಿವ ಕೆ,ಜೆ, ಜಾರ್ಜ್‌ ಅವರ ಸೂಚನೆ ಮೇರೆಗೆ 4ನೇ ಪೂರ್ವ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಸುಬ್ರಮಣ್ಯ ಟಿ , ಸಹಾಯಕ ಇಂಜಿನಿಯರ್‌ ಚೇತನ್‌ ಎಸ್‌ , ಕಿರಿಯ ಇಂಜಿನಿಯರ್‌ ರಾಜಣ್ಣ , ಕಿರಿಯ ಪವರ್‌ ಮನ್‌ ಮಂಜುನಾಥ್‌ ರೇವಣ್ಣ ಹಾಗೂ ಲೈನ್‌ ಮನ್‌ ಬಸವರಾಜು ಅವರನ್ನು ಅಮಾನತುಗೊಳಿಸಿ ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ವಿಸೃತ ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು.

ಅದೇ ರೀತಿ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಪೂರ್ವ ವೃತ್ತದ ಅಧೀಕ್ಷಕ ಇಂಜಿನಿಯರ್‌ ಲೋಕೇಶ್‌ ಬಾಬು ಎಂ ಹಾಗೂ ಬೆಸ್ಕಾಂ ವೈಟ್‌ ಫೀಲ್ಡ್‌ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಆಗಿರುವ ಶ್ರೀರಾಮು ಅವರಿಗೆ ಕಾರಣ ಕೇಳಿ ಶೋಕಾಸ್‌ ನೋಟಿಸ್‌ ನೀಡಲಾಗಿದೆ.

ಘಟನೆ ವಿವರ: ಕಾಡುಗೋಡಿಯ ಎಫ್‌ ೯ ಬಿಪಿಎಲ್‌ ಫೀಡರ್‌ ಬೆಳಗ್ಗೆ 3.50ಕ್ಕೆ ಟ್ರಿಪ್‌ ಆಗಿತ್ತು. ಪುನ: 3.55 ಕ್ಕೆ ಲೈನ್‌ ಚಾರ್ಜ್‌ ಆಗಿರುವುದು ದಾಖಲಾಗಿರುತ್ತದೆ. ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದು, ಅದರಲ್ಲಿ ವಿದ್ಯುತ್‌ ಪ್ರವಹಿಸುತ್ತಿತ್ತು. ಈ ತುಂಡಾದ ತಂತಿ ತುಳಿದು ತಾಯಿ ಮಗಳು ಮೃತ ಪಟ್ಟಿರುತ್ತಾರೆ.

ಬೆಸ್ಕಾಂ ಅಧಿಕಾರಿಗಳ ಈ ಕರ್ತವ್ಯಲೋಪವನ್ನು ಇಂಧನ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ರಾಜ್ಯದ ಎಲ್ಲಾ ಎಸ್ಕಾಂಗಳ ಇಂಜಿನಿಯರ್‌ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

English summary :Mother and daughter died in electrical accident: BESCOM suspends 5 officials
401 logo logo logo logo

ಒಕ್ಕಲಿಗ ಸಮುದಾಯದಲ್ಲಿ ಮದುವೆಗೆ ಒಳ್ಳೆಯ ಸಂಬಂಧ ನಿರೀಕ್ಷಿಸುತ್ತಿದ್ದೀರಾ?
ಒಕ್ಕಲಿಗ.ಮದುವೆ.ನೆಟ್ - ಉಚಿತ ನೋಂದಣಿ!

ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿ, ಮರೆತ ಸಿಎಂ ಸಿದ್ದರಾಮಯ್ಯ?
ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿ, ಮರೆತ ಸಿಎಂ ಸಿದ್ದರಾಮಯ್ಯ?
ಕಾರ್ ಬಸ್ ನಡುವೆ ಅಪಘಾತ : ಬೆಂಕಿಗೆ ಕಾರ್ ಆಹುತಿ, ಬಸ್  ಭಾಗಶಃ ನಷ್ಟ
ಕಾರ್ ಬಸ್ ನಡುವೆ ಅಪಘಾತ : ಬೆಂಕಿಗೆ ಕಾರ್ ಆಹುತಿ, ಬಸ್ ಭಾಗಶಃ ನಷ್ಟ
2 ಹೊಸ ರಾಜ್ಯಗಳೊಂದಿಗೆ ತನ್ನ ಬಾಹುಗಳನ್ನು 16 ರಾಜ್ಯಕ್ಕೆ ವಿಸ್ತರಿಸಿದ ಬಿಜೆಪಿ
2 ಹೊಸ ರಾಜ್ಯಗಳೊಂದಿಗೆ ತನ್ನ ಬಾಹುಗಳನ್ನು 16 ರಾಜ್ಯಕ್ಕೆ ವಿಸ್ತರಿಸಿದ ಬಿಜೆಪಿ
 ಮೋದಿ ಗ್ಯಾರಂಟಿ : 115 ಸ್ಥಾನ ಪಡೆದು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ
ಮೋದಿ ಗ್ಯಾರಂಟಿ : 115 ಸ್ಥಾನ ಪಡೆದು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ
ಸಿಎಂ ಸಿದ್ದರಾಮಯ್ಯ ಅವರೇ, ದೇಶ ಕಾಯುವ ಸೈನಿಕರನ್ನು ಕಂಡರೆ ನಿಮಗೇಕೆ  ದ್ವೇಷ - ಬಿಜೆಪಿ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಅವರೇ, ದೇಶ ಕಾಯುವ ಸೈನಿಕರನ್ನು ಕಂಡರೆ ನಿಮಗೇಕೆ ದ್ವೇಷ - ಬಿಜೆಪಿ ಪ್ರಶ್ನೆ
ಕಂದಾಯ, ಪಂಚಾಯಿತಿ ಅಧಿಕಾರಿಗಳು ಲಂಚ ಕೇಳಿದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ
ಕಂದಾಯ, ಪಂಚಾಯಿತಿ ಅಧಿಕಾರಿಗಳು ಲಂಚ ಕೇಳಿದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ
ಕರ್ನಾಟಕವನ್ನು ಉಗ್ರರ ಪಾಲಿನ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್ ಸರ್ಕಾರ - ಬಿಜೆಪಿ
ಕರ್ನಾಟಕವನ್ನು ಉಗ್ರರ ಪಾಲಿನ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್ ಸರ್ಕಾರ - ಬಿಜೆಪಿ
ಬೆಂಗಳೂರಿನಾದ್ಯಂತ ಶಾಲೆಗಳಿಗೆ ಬಾಂಬ್ ಬೆದರಿಕೆ : ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬೆಂಗಳೂರಿನಾದ್ಯಂತ ಶಾಲೆಗಳಿಗೆ ಬಾಂಬ್ ಬೆದರಿಕೆ : ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ
 ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ತುರ್ತು ರಜೆ ಘೋಷಣೆ, ನಗರದಲ್ಲಿ ಭೀತಿ
ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ತುರ್ತು ರಜೆ ಘೋಷಣೆ, ನಗರದಲ್ಲಿ ಭೀತಿ
ಮಣಿಪುರದ ಬಂಡಾಯ ಸಶಸ್ತ್ರ ಗುಂಪು ಯುಎನ್‌ಎಲ್‌ಎಫ್ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ತ್ರಿಪಕ್ಷೀಯ ಶಾಂತಿ ಒಪ್ಪಂದ
ಮಣಿಪುರದ ಬಂಡಾಯ ಸಶಸ್ತ್ರ ಗುಂಪು ಯುಎನ್‌ಎಲ್‌ಎಫ್ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ತ್ರಿಪಕ್ಷೀಯ ಶಾಂತಿ ಒಪ್ಪಂದ
ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು