ಸಂಭಾಲ್ ಕಲ್ಲುತೂರಾಟದಲ್ಲಿ 4 ಸಾವು, 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯ :ಶಾಹಿ ಜಾಮಾ ಮಸೀದಿಯಲ್ಲಿ ಹೆಚ್ಚಿನ ಭದ್ರತೆ, ಶಾಲೆ, ಇಂಟರ್ನೆಟ್ ಬಂದ್ | JANATA NEWS
ಸಂಭಾಲ್ : ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಜಾಮಾ ಮಸೀದಿಯ ಭಾನುವಾರ ಸಮೀಕ್ಷೆಯ ಸಂದರ್ಭದಲ್ಲಿ, ಸಮೀಕ್ಷೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ತೀವ್ರಗಾಮಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಹಿಂಸಾತ್ಮಕವಾಗಿ ಘರ್ಷಣೆ ನಡೆಸಿ ಕಲ್ಲುತೂರಾಟ ನಡೆಸಿದರು.
ನಿನ್ನೆ ಮಸೀದಿಯ ಸಮೀಕ್ಷೆ ನಡೆಸಲು ಸಮೀಕ್ಷಾ ತಂಡ ಆಗಮಿಸಿದಾಗ ಕಲ್ಲು ತೂರಾಟ ನಡೆದ ಘಟನೆ ನಡೆದ ಬೆನ್ನಲ್ಲೇ ಸಂಭಾಲ್‌ನ ಶಾಹಿ ಜಾಮಾ ಮಸೀದಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಜಾಗದಲ್ಲಿ ಹರಿಹರ ದೇವಸ್ಥಾನವಿದೆ ಎಂದು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸರ್ವೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಉತ್ತರ ಪ್ರದೇಶದ ಶಾಹಿ ಜಾಮಾ ಮಸೀದಿಯನ್ನು ತಲುಪಿದ ಸಮೀಕ್ಷಾ ತಂಡದ ಮೇಲೆ ತೀವ್ರಗಾಮಿ ಗುಂಪುಗಳಿಂದ ಭಾರೀ ಕಲ್ಲು ತೂರಾಟ ನಡೆಸಿದ್ದರು.
ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಸುಮಾರು 20 ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ, ಎನ್ನಲಾಗಿದೆ.
ಈ ಹಿಂಸಾಚಾರದ ನಂತರ, ಆಡಳಿತವು 12 ನೇ ತರಗತಿಯವರೆಗಿನ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಇದರೊಂದಿಗೆ, ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ದುಷ್ಕರ್ಮಿಗಳನ್ನು ಗುರುತಿಸಲಾಗುತ್ತಿದೆ.
ಸಂಭಾಲ್‌ನಲ್ಲಿ ನ್ಯಾಯಾಲಯ ನೇಮಿಸಿದ ಸರ್ವೇಕ್ಷಣಾ ತಂಡದ ಮೇಲೆ ದಾಳಿಯ ನಂತರ, ಸಾಕ್ಷ್ಯಾಧಾರಗಳ ನಾಶವನ್ನು ಶಂಕಿಸಲಾಗಿದೆ ಎಂದು, ಹಿರಿಯ ಹಿಂದೂ ಪರ ವಕೀಲ ವಿಷ್ಣು ಜೈನ್ ಭಾರತೀಯ ಪುರಾತತ್ವ ಸರ್ವೇಕ್ಷಣೆಯನ್ನು ತಕ್ಷಣವೇ ಸಂಭಾಲ್ ಶ್ರೀ ಹರಿ ಹರ್ ದೇವಸ್ಥಾನದ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ವಿನಂತಿಸಿದರು.
ಭಾನುವಾರ ಬೆಳಿಗ್ಗೆ ಸಮೀಕ್ಷೆ ತಂಡವು ಕೆಲಸವನ್ನು ಪ್ರಾರಂಭಿಸಿದಾಗ ಹೆಚ್ಚಿನ ಸಂಖ್ಯೆಯ ಜನರು ಶಾಹಿ ಜಾಮಾ ಮಸೀದಿಯಲ್ಲಿ ಜಮಾಯಿಸಿ, ಅವರು ಅಲ್ಲಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಹಿಂಸಾಚಾರ ಪ್ರಾರಂಭವಾಯಿತು.
ಮಸೀದಿಯಲ್ಲಿ ಸಾಮಾನ್ಯವಾಗಿ ಮಧ್ಯಾಹ್ನ ನಡೆಯುವ ಪ್ರಾರ್ಥನೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬೆಳಿಗ್ಗೆ ಸಮಯದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದರು.