ಕೇಶವ ಫೌಂಡೇಷನ್ ಅಧಿಕೃತ ವೆಬ್ಸೈಟ್ ಲೋಕಾರ್ಪಣೆ ಮಾಡಿದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ | JANATA NEWS

ಧರ್ಮಸ್ಥಳ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಯವರು ಇಂದು ಬೆಳಿಗ್ಗೆ ಎನ್.ಜಿ.ಓ ಸಂಸ್ಥೆಯಾಗಿರುವ ಕೇಶವ ಫೌಂಡೇಷನ್, ಬೆಂಗಳೂರು., ತಮ್ಮ ನೂತನವಾಗಿ ನಿರ್ಮಿಸಲಾದ www.helpin.in ಅಧಿಕೃತ ವೆಬ್ಸೈಟ್ ಲೋಕಾರ್ಪಣೆಗೊಳಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಅಧ್ಯಕ್ಷರಾದ ಹರೀಶ ನಾಯ್ಕ, ಖಜಾಂಚಿಗಳಾದ ವಿನುತಾ ಹಾಗೂ ಸಂಸ್ಥೆಯ ಸದಸ್ಯರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ತಾವು ಲೋಕಾರ್ಪಣೆ ಮಾಡಿದ ಸಂಸ್ಥೆಯ ವೆಬ್ಸೈಟ್ ನ್ನು ಸಂಪೂರ್ಣವಾಗಿ ಕುತೂಹಲದಿಂದ ವೀಕ್ಷಿಸಿದ ಧರ್ಮದರ್ಶಿಗಳು ಈ ವೆಬ್ಸೈಟ್ ನೊಂದಿಗೆ ಕೇಶವ ಫೌಂಡೇಷನ್ ಜನಹಿತಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಈಗಾಗಲೇ ನಿರ್ಮಿಸಿ 7 ಸಮುದಾಯಗಳ ವಧುವರನ್ವೇಷಣೆ ವೆಬ್ಸೈಟ್ ಬಗ್ಗೆ ಮಾಹಿತಿ ಪಡೆದ ಧರ್ಮದರ್ಶಿಗಳು ಸಂಸ್ಥೆಯ ಉದ್ದೇಶ ಹಾಗೂ ಉತ್ತಮ ಸಾಮಾಜಿಕ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಚಿತ ಆರೋಗ್ಯ ಶಿಬಿರಗಳ ಬಗ್ಗೆ ಮಾಹಿತಿಯನ್ನು ಧರ್ಮದರ್ಶಿಗಳು ಪಡೆದುಕೊಂಡರು ಹಾಗೂ ಸಂಸ್ಥೆಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ಆ ಭಗವಂತ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸೋಣ ಎಂದಿದ್ದಾರೆ.
ಸಾಮಾಜಿಕ ಕಳಕಳಿಯಿಂದ ಅಸ್ತಿತ್ವಕ್ಕೆ ಬಂದ ಎನ್.ಜಿ.ಓ ಕೇಶವ ಫೌಂಡೇಷನ್ ಒಂದು ಲಾಭ ರಹಿತ ಸಂಸ್ಥೆಯಾಗಿದ್ದು 2013 ರಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ಜನರಿಗೆ ಸೇವೆ ಸಲ್ಲಿಸುತ್ತಿದೆ. ಹಾಗೂ ಧಾನಿಗಳಿಗೆ ತೆರಿಗೆ ಉಳಿಸುವ ಮೂಲಕ ಸಹಾಯ ಮಾಡುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯಿಂದ 80ಜಿ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಸಮುದಾಯದ ಸಂಘಗಳಿಗೆ ಡಿಜಿಟಲ್ ಉಪಸ್ಥಿತಿಯ ಅಗತ್ಯವಿದೆ ಎಂದು ಅರಿತುಕೊಂಡು, 2013ರಿಂದ ಹೆಚ್ಚು ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನದ ವೆಬ್‌ಸೈಟ್‌ಗಳನ್ನು ಸಂಘಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಒದಗಿಸಲು ಪ್ರಾರಂಭಿಸಿದ್ದು, 3 ಸಂಘಗಳಿಗೆ ವಿನ್ಯಾಸ ಅಥವಾ ವಾರ್ಷಿಕ ನಿರ್ವಹಣೆಯ ವಿಷಯದಲ್ಲಿ, ಎಲ್ಲವನ್ನೂ ಸಂಪೂರ್ಣವಾಗಿ ಉಚಿತ ವೆಚ್ಚದಲ್ಲಿ ಪೂರೈಸುತ್ತಿದೆ. ಇದು ಸಮುದಾಯ ಸಂಘಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ಆಧುನಿಕ ಜನರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಟ್ಟಿತು. ಮತ್ತು ಈ ಸೇವೆಗಳನ್ನು ಇನ್ನೂ ಅನೇಕ ಸಂಘಗಳಿಗೆ ವಿಸ್ತರಿಸಲು ಕೇಶವ ಫೌಂಡೇಷನ್ ಉತ್ಸುಕರಾಗಿದ್ದೇವೆ.