ಪಾಂಗೊಂಗ್ ತ್ಸೊ ಸರೋವರ, ಲಡಾಖ್ - ಯಾಕಿಷ್ಟು ಸುದ್ದಿಯಲ್ಲಿದೆ? | Janata news

23 May 2020
587
Pangong Tso lake, Ladakh - Why so famous?

ಲಡಾಖ್ : ಪಾಂಗೊಂಗ್ ತ್ಸೊ ಸರೋವರ, ಲಡಾಖ್ - ಭಾರತದ ಕೇಂದ್ರಾಡಳಿತ ಪ್ರದೇಶದ ಹಿಮಾಲಯದ ತಪ್ಪಲಿನಲ್ಲಿ 14,270 ಅಡಿ ಎತ್ತರದಲ್ಲಿರುವ ಮನಸ್ಸನ್ನು ಮೋಡಿಮಾಡುವ ಸರೋವರವಾಗಿದೆ. ಪೂರ್ವ ಲಡಾಖ್‌ನ ಭಾರತ-ಚೀನಾ ಗಡಿನಾಡಿನಲ್ಲಿರುವ ಪಾಂಗೊಂಗ್ ತ್ಸೋ ಸರೋವರವು ಹೆಚ್ಚಾಗಿ ಸುದ್ದಿಯಲ್ಲಿದೆ.
PangongTso
ಇದು ಸರಿಸುಮಾರು 134 ಕಿ.ಮೀ ಉದ್ದ ಮತ್ತು 5 ಕಿ.ಮೀ ಅಗಲವಾಗಿದ್ದು ಟಿಬೆಟ್‌ ನ ಒಳಗೂ ವಿಸ್ತರವಾಗಿ ಹಬ್ಬಿದೆ. ಎತ್ತರದ ಪರ್ವತ ಶಿಖರಗಳಲ್ಲಿ ನೆಲೆಗೊಂಡಿರುವ ಈ ನೀರಿನಲ್ಲಿರುವ ಹಿಮಾಲಯನ್ ಶಿಖರಗಳ ಅತ್ಯುನ್ನತ ಪ್ರತಿಫಲನಗಳು ಇನ್ನಷ್ಟು ಸೌಂದರ್ಯವನ್ನುಂಟುಮಾಡುತ್ತದೆ.
PangongTso
ಪಾಂಗೊಂಗ್ ಎಂಬುದು ಭಾರತೀಯ ಹೆಸರು ಹಾಗೂ ತ್ಸೊ ಟಿಬೆಟಿ ಹೆಸರು. ಲಡಾಖಿ ಭಾಷೆಯಲ್ಲಿ, ಪಾಂಗೊಂಗ್ ಎಂದರೆ ವ್ಯಾಪಕವಾದ ಸಾಂದ್ರತೆ, ಮತ್ತು ತ್ಸೊ ಎಂಬುದು ಟಿಬೆಟಿಯನ್‌ನ ಸರೋವರ. ಹಾಗಾಗಿ, ಎರಡು ದೇಶಗಳ ಭೂ ಭಾಗಗಳಲ್ಲಿರುವ ಕಾರಣ ಎರಡೂ ಪದಗಳನ್ನು ಸೇರಿಸಿ ಪಾಂಗೊಂಗ್ ತ್ಸೊ ಸರೋವರದ ಎಂದು ಕರೆಯಲ್ಪುಡುತ್ತದೆ.
PangongTso
ದಿನವಿಡೀ ಸರೋವರದಲ್ಲಿ ಕಂಡುಬರುವ ಬದಲಾವಣೆಗಳು ಅಸಂಖ್ಯಾತ ಬಣ್ಣಗಳಿಗೆ ಸಾಕ್ಷಿಯಾಗುವುದು, ಈ ಸರೋವರದ ಉತ್ತಮ ಆಕರ್ಷಣಿಯ ಭಾಗವಾಗಿದೆ. ಈ ಸರೋವರದ ನೀರು ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ಹಾಗೆ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ಹೀಗೆ ಕ್ಷಣಕ್ಕೊಂದು ಬಣ್ಣಗಳನ್ನು ಬದಲಾಯಿಸಬಹುದು. ಚಳಿಗಾಲದಲ್ಲಿ ಸರೋವರವು ಲವಣಯುಕ್ತ ನೀರಿನ ಹೊರತಾಗಿಯೂ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ.
PangongTso
ಅದರ ದಂಡೆಯಲ್ಲಿ ಕಳೆದ ಆಗಸ್ಟ್ 19, 2017 ರಂದು, ಅತ್ಯಂತ ಪ್ರಸಿದ್ಧವಾಗಿ ಡೋಕ್ಲಾಮ್ ನಿಲುಗಡೆ ಸಮಯದಲ್ಲಿ, ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಜಗಳದ ವೈರಲ್ ಆಗಿದ್ದ ವೀಡಿಯೊದಲ್ಲಿ - ಒದೆಯುವುದು ಮತ್ತು ಹೊಡೆಯುವುದು, ಕಲ್ಲುಗಳನ್ನು ಎಸೆಯುವುದು ಮತ್ತು ಕೋಲುಗಳು ಮತ್ತು ಉಕ್ಕಿನ ಕಡ್ಡಿಗಳ ಬಳಕೆ ಸೇರಿದಂತೆ, ಯೋಧರ ತೀವ್ರವಾದ ಗಾಯಗಳಿಗೆ ಕಾರಣವಾಗಿತ್ತು.
PangongTso
ಇದು 1962ರ ಇಂಡೋ-ಸಿನೋ ಯುದ್ಧದಲ್ಲಿ ತೆಗೆಯಲಾದ ಚಿತ್ರ ಎನ್ನಲಾಗಿದೆ. ಏಷ್ಯಾದ ಎರಡು ಪ್ರಮುಖ ಶಕ್ತಿಗಳ ನಡುವಿನ ಪಂಗೊಂಗ್ ತ್ಸೋ ಸರೋವರದ ಪ್ರಸ್ತುತ ತಿಕ್ಕಾಟದ ಪ್ರದೇಶವನ್ನು ಅಂದು ಕಾವಲು ಮಾಡುವ ಭಾರತೀಯ ಸೈನಿಕರು.

English summary :Pangong Tso lake, Ladakh - Why so famous?

ಶಿವಮೊಗ್ಗ ಸ್ಪೋಟ ಪ್ರಕರಣ: ದುರಂತದಲ್ಲಿ ಮಡಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ: ಸಿಎಂ
ಶಿವಮೊಗ್ಗ ಸ್ಪೋಟ ಪ್ರಕರಣ: ದುರಂತದಲ್ಲಿ ಮಡಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ: ಸಿಎಂ
ಬಾಗ್ದಾದ್‌ನ ಅವಳಿ ಆತ್ಮಾಹುತಿ ಬಾಂಬ್ ದಾಳಿ ಹೊಣೆಗಾರಿಕೆ ವಹಿಸಿಕೊಂಡ ಇಸ್ಲಾಮಿಕ್ ಸ್ಟೇಟ್
ಬಾಗ್ದಾದ್‌ನ ಅವಳಿ ಆತ್ಮಾಹುತಿ ಬಾಂಬ್ ದಾಳಿ ಹೊಣೆಗಾರಿಕೆ ವಹಿಸಿಕೊಂಡ ಇಸ್ಲಾಮಿಕ್ ಸ್ಟೇಟ್
ರೈಲ್ವೇಗೆ ಮಾತ್ರವಲ್ಲದೇ, ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೂ ಪೂರೈಕೆ ಮಾಡಲಾಗುತಿತ್ತು, ಸಮಗ್ರ ತನಿಖೆಯಿಂದ ಸತ್ಯ ಹೊರಬರಲಿದೆ: ಬಿ.ವೈ.ರಾಘವೇಂದ್ರ
ರೈಲ್ವೇಗೆ ಮಾತ್ರವಲ್ಲದೇ, ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೂ ಪೂರೈಕೆ ಮಾಡಲಾಗುತಿತ್ತು, ಸಮಗ್ರ ತನಿಖೆಯಿಂದ ಸತ್ಯ ಹೊರಬರಲಿದೆ: ಬಿ.ವೈ.ರಾಘವೇಂದ್ರ
 ಬಡ ಕಾರ್ಮಿಕರ ಜೀವ ಹರಣಕ್ಕೆ, ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಎಚ್‌ಡಿಕೆ ಆಗ್ರಹ
ಬಡ ಕಾರ್ಮಿಕರ ಜೀವ ಹರಣಕ್ಕೆ, ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಎಚ್‌ಡಿಕೆ ಆಗ್ರಹ
ಶಿವಮೊಗ್ಗದಲ್ಲಿ ಸ್ಫೋಟ: ಉನ್ನತ ಮಟ್ಟದ ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶ
ಶಿವಮೊಗ್ಗದಲ್ಲಿ ಸ್ಫೋಟ: ಉನ್ನತ ಮಟ್ಟದ ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶ
ಆಸ್ಪತ್ರೆಗೆ ದಾಖಲಾಗಿದ್ದ ವಿ.ಕೆ.ಶಶಿಕಲಾಗೆ ಕೊರೊನಾ ಸೋಂಕು ದೃಢ!
ಆಸ್ಪತ್ರೆಗೆ ದಾಖಲಾಗಿದ್ದ ವಿ.ಕೆ.ಶಶಿಕಲಾಗೆ ಕೊರೊನಾ ಸೋಂಕು ದೃಢ!
ಶಿವಮೊಗ್ಗ ಡೈನಾಮೈಟ್‌ ಸ್ಫೋಟದಲ್ಲಿ ಕಾರ್ಮಿಕರು ಸಾವು: ಪ್ರಧಾನಿ ಮೋದಿ ಸಂತಾಪ
ಶಿವಮೊಗ್ಗ ಡೈನಾಮೈಟ್‌ ಸ್ಫೋಟದಲ್ಲಿ ಕಾರ್ಮಿಕರು ಸಾವು: ಪ್ರಧಾನಿ ಮೋದಿ ಸಂತಾಪ
ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ ದುರಂತ; 10ಕ್ಕೂ ಹೆಚ್ಚು ಕಾರ್ಮಿಕರು ಮೃತ್ಯು ಶಂಕೆ
ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ ದುರಂತ; 10ಕ್ಕೂ ಹೆಚ್ಚು ಕಾರ್ಮಿಕರು ಮೃತ್ಯು ಶಂಕೆ
ರಾಜ್ಯ ಸಚಿವರ ಖಾತೆ ಹಂಚಿಕೆ : ಯಾರ್ಯಾರಿಗೆ ಯಾವ ಖಾತೆ ವಿವರ
ರಾಜ್ಯ ಸಚಿವರ ಖಾತೆ ಹಂಚಿಕೆ : ಯಾರ್ಯಾರಿಗೆ ಯಾವ ಖಾತೆ ವಿವರ
ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ? ಸಂಪುಟ ಸಭೆಗೆ ಗೈರಾದ ಅತೃಪ್ತ ಸಚಿವರು
ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ? ಸಂಪುಟ ಸಭೆಗೆ ಗೈರಾದ ಅತೃಪ್ತ ಸಚಿವರು
ವರದಕ್ಷಿಣೆ ಕಿರುಕುಳ: ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ವರದಕ್ಷಿಣೆ ಕಿರುಕುಳ: ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ನಾಯಿಗೆ ಬೈಕ್​ ಡಿಕ್ಕಿ: ಡ್ರಾಪ್ ತೆಗೆದುಕೊಂಡಿದ್ದ ಮಹಿಳೆ ದುರ್ಮರಣ!
ನಾಯಿಗೆ ಬೈಕ್​ ಡಿಕ್ಕಿ: ಡ್ರಾಪ್ ತೆಗೆದುಕೊಂಡಿದ್ದ ಮಹಿಳೆ ದುರ್ಮರಣ!

ನ್ಯೂಸ್ MORE NEWS...