ಜೂನ್ 21ರಂದು ಕಂಕಣ ಸೂರ್ಯಗ್ರಹಣ; ಯಾವ ರಾಶಿಯವರಿಗೆ ಶುಭಫಲ, ಅಶುಭ! | Janata news

18 Jun 2020
502
solar eclipse june 2020

ಬೆಂಗಳೂರು : ಜೂನ್ 21ರ ಭಾನುವಾರ ಆಷಾಢ ಮಾಸದ ಅಮಾಸ್ಯೆಯಂದು 2020ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಚಂದ್ರನ ಹಿಂದಿರುವ ಸೂರ್ಯನ ಚಿತ್ರಣವು ಚಂದ್ರನ ನೆರಳಿನಿಂದ ಆವರಿಸಲ್ಪಡುತ್ತದೆ. ಈ ವಿದ್ಯಾಮಾನವನ್ನು ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಬೆಳಗ್ಗೆ 10:12 ಕ್ಕೆ ಗ್ರಹಣ ಆರಂಭ, ಬೆಳಗ್ಗೆ 11:47ಕ್ಕೆ ಗ್ರಹಣ ಮಧ್ಯಕಾಲವಾಗಲಿದ್ದು ಭಾಗಶಃ ಸೂರ್ಯಗ್ರಹಣವಾಗಲಿದೆ. ಮಧ್ಯಾಹ್ನ 1:31ಕ್ಕೆ ಗ್ರಹಣ ಮೋಕ್ಷ ಸಂಭವಿಸುವುದು.

ಈ ಸಮಯದಲ್ಲಿ ಸೂರ್ಯನು ಬೆಂಕಿಯುಂಗುರದಂತೆ ಕಾಣಿಸುವುದರಿಂದ, ಇದೊಂದು ಅಪರೂಪದ ವಿದ್ಯಾಮಾನವಾಗಿದ್ದು, ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆದರೆ ಈ ದೃಶ್ಯ ಕಾಣಿಸಿಕೊಳ್ಳಲಿರುವುದು ರಾಜಸ್ಥಾನ, ಹರಿಯಾಣ ಮತ್ತು ಉತ್ತರಾಖಂಡ್‌ನಲ್ಲಿ ಮಾತ್ರ. ಇದನ್ನು ಹೊರತುಪಡಿಸಿ ದೇಶದ ಕೆಲವೆಡೆ ಭಾಗಶಃ ಸೂರ್ಯಗ್ರಹಣವನ್ನು ಕಾಣಬಹುದಾಗಿದೆ.

ಈ ಗ್ರಹಣದಲ್ಲಿ ಸೂರ್ಯನ ಹೊರಗಿನ ಅಂಚು ಬೆಂಕಿಯ ಉಂಗುರ ದಂತೆ ಕಾಣುತ್ತದೆ. ಈ ಗ್ರಹಣದಲ್ಲಿ ಚಂದ್ರನು ಸೂರ್ಯನ 98.8%ರಷ್ಟು ಭಾಗವನ್ನು ಆವರಿಸುವುದರಿಂದ ಈ ಉಂಗುರವು ತೆಳುವಾಗಿ ಕಾಣುತ್ತದೆ. ಈ ಗ್ರಹಣವು ಈ ಶತಮಾನದ ಆಳವಾದ ಭಾಗಶಃ ಗ್ರಹಣವೆಂದು ತಜ್ಞರು ಹೇಳುತ್ತಾರೆ. ಇದೇ ರೀತಿಯ ಗ್ರಹಣವು ಮುಂದೆ ಹನ್ನೊಂದು ವರ್ಷಗಳ ನಂತರ ಅಂದರೆ 2031ರಲ್ಲಿ ದೇಶದಲ್ಲಿ ಗೋಚರಿಸಲಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯಗ್ರಹಣ ಕೆಲವರಿಗೆ ಪ್ರಯೋಜನಕಾರಿಯಾಗಬಹುದು ಮತ್ತು ಕೆಲವರಿಗೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುವುದು. ರಾಶಿಗಳ ಮೇಲೆ ಗ್ರಹಣದ ಪರಿಣಾಮಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣ ಸಂಭವಿಸುವುದರಿಂದ ಕನ್ಯಾ, ಮಕರ, ಸಿಂಹ ಹಾಗೂ ಮೇಷ ರಾಶಿಯವರಿಗೆ ಶುಭಫಲ ಇದೆ.

ಮಿಥುನ, ಕರ್ಕಾಟಕ, ತುಲಾ, ವೃಷಭ, ವೃಶ್ಚಿಕ, ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಈ ಭಾಗಶಃ ಸೂರ್ಯಗ್ರಹಣದಿಂದ ಅಶುಭ ಫಲವಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.

ಸೂರ್ಯಗ್ರಹಣವನ್ನು ನೋಡಿದರೆ ಗಂಭೀರ ಅಥವಾ ಶಾಶ್ವತ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸುರಕ್ಷಿತ ಸೋಲಾರ್‌ ಫಿಲ್ಟರ್‌, ಸೌರ ಕನ್ನಡಕ, ಪಿನ್‌ ಹೋಲ್‌ ಕ್ಯಾಮರಾ ಬಳಸಿ ನೋಡಬಹುದು.

English summary :solar eclipse june 2020

ದಿ ಸುರೇಶ ಅಂಗಡಿ ನಿವಾಸಕ್ಕೆ ಅಮಿತ್‌ ಶಾ ಭೇಟಿ!
ದಿ ಸುರೇಶ ಅಂಗಡಿ ನಿವಾಸಕ್ಕೆ ಅಮಿತ್‌ ಶಾ ಭೇಟಿ!
ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ: ಸುಧಾಕರ್
ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ: ಸುಧಾಕರ್
ಕೋವಿಡ್-19 : ರಾಜ್ಯದಲ್ಲಿಂದು 584 ಹೊಸ ಪ್ರಕರಣಗಳು, 4 ಸಾವು, 676 ಮಂದಿ ಡಿಸ್ಚಾರ್ಜ್
ಕೋವಿಡ್-19 : ರಾಜ್ಯದಲ್ಲಿಂದು 584 ಹೊಸ ಪ್ರಕರಣಗಳು, 4 ಸಾವು, 676 ಮಂದಿ ಡಿಸ್ಚಾರ್ಜ್
ಭದ್ರಾವತಿ : ಕ್ಷಿಪ್ರ ಕಾರ್ಯ ಪಡೆ(ರಾಪಿಡ್ ಆಕ್ಷನ್ ಫೋರ್ಸ್) ಘಟಕದ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಷಾ
ಭದ್ರಾವತಿ : ಕ್ಷಿಪ್ರ ಕಾರ್ಯ ಪಡೆ(ರಾಪಿಡ್ ಆಕ್ಷನ್ ಫೋರ್ಸ್) ಘಟಕದ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಷಾ
ಬೆಂಗಳೂರಿನಲ್ಲಿ ಫೆ.3ರಿಂದ ಏರ್ ಶೋ: ಬಿಬಿಎಂಪಿಯಿಂದ ಮಾಂಸ ಮಾರಾಟ ನಿಷೇಧಿಸಿ ಆದೇಶ
ಬೆಂಗಳೂರಿನಲ್ಲಿ ಫೆ.3ರಿಂದ ಏರ್ ಶೋ: ಬಿಬಿಎಂಪಿಯಿಂದ ಮಾಂಸ ಮಾರಾಟ ನಿಷೇಧಿಸಿ ಆದೇಶ
ವ್ಯಾಕ್ಸಿನೇಷನ್ ಡ್ರೈವ್ : ಸರ್ಕಾರದ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್ಸ್
ವ್ಯಾಕ್ಸಿನೇಷನ್ ಡ್ರೈವ್ : ಸರ್ಕಾರದ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್ಸ್
ಲಸಿಕೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಲಸಿಕೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಆಪರೇಷನ್‌ ಕಮಲಕ್ಕೆ ಸಾಲ: ರಮೇಶ್ ಜಾರಕಿಹೊಳಿ ಆರೋಪದ ಕುರಿತು ತನಿಖೆಯಾಗಲಿ: ಸಿದ್ದರಾಮಯ್ಯ ಆಗ್ರಹ
ಆಪರೇಷನ್‌ ಕಮಲಕ್ಕೆ ಸಾಲ: ರಮೇಶ್ ಜಾರಕಿಹೊಳಿ ಆರೋಪದ ಕುರಿತು ತನಿಖೆಯಾಗಲಿ: ಸಿದ್ದರಾಮಯ್ಯ ಆಗ್ರಹ
ಅಮಿತ್ ಶಾ ರಾಜ್ಯಕ್ಕೆ ಆಗಮನ: ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿಎಂ
ಅಮಿತ್ ಶಾ ರಾಜ್ಯಕ್ಕೆ ಆಗಮನ: ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿಎಂ
ಸಿಡಿ ಎಂಬುದು ಇಲ್ಲವೇ ಇಲ್ಲ, ಸಿಡಿ ಕೊಡಿ ಎಂದು ಮುಖ್ಯಮಂತ್ರಿ ಕೂಡ ಇಷ್ಟು ಧೈರ್ಯದಿಂದ ಹೇಳಿದ್ದಾರೆ: ಪ್ರಹ್ಲಾದ್ ಜೋಶಿ
ಸಿಡಿ ಎಂಬುದು ಇಲ್ಲವೇ ಇಲ್ಲ, ಸಿಡಿ ಕೊಡಿ ಎಂದು ಮುಖ್ಯಮಂತ್ರಿ ಕೂಡ ಇಷ್ಟು ಧೈರ್ಯದಿಂದ ಹೇಳಿದ್ದಾರೆ: ಪ್ರಹ್ಲಾದ್ ಜೋಶಿ
ಡಿ ಗ್ರೂಪ್ ನೌಕರರ ಮೇಲೆ ಲಸಿಕೆಗೆ  ಪ್ರಯೋಗ ಮಾಡುವ ಮೊದಲು ಮಂತ್ರಿಗಳು ಶಾಸಕರು ಲಸಿಕೆ ಪಡೆದು ಮಾದರಿಯಾಗಲಿ!
ಡಿ ಗ್ರೂಪ್ ನೌಕರರ ಮೇಲೆ ಲಸಿಕೆಗೆ ಪ್ರಯೋಗ ಮಾಡುವ ಮೊದಲು ಮಂತ್ರಿಗಳು ಶಾಸಕರು ಲಸಿಕೆ ಪಡೆದು ಮಾದರಿಯಾಗಲಿ!
ಬಾಕಿ ಹಣ ಪಾವತಿ ವಿವಾದ : ಪಾಕಿಸ್ತಾನದ ಪಿಐಎ ವಿಮಾನವನ್ನು ವಶಕ್ಕೆ ಪಡೆದ ಮಲೇಷ್ಯಾ - ಭಾರಿ ಮುಖಭಂಗ
ಬಾಕಿ ಹಣ ಪಾವತಿ ವಿವಾದ : ಪಾಕಿಸ್ತಾನದ ಪಿಐಎ ವಿಮಾನವನ್ನು ವಶಕ್ಕೆ ಪಡೆದ ಮಲೇಷ್ಯಾ - ಭಾರಿ ಮುಖಭಂಗ

ನ್ಯೂಸ್ MORE NEWS...