ಬಳ್ಳಾರಿ ಸರ್ಕಾರಿ ಕಚೇರಿಯಲ್ಲೇ ಅಧಿಕಾರಿಯ ರೋಮ್ಯಾನ್ಸ್: ವಿಡಿಯೋ ವೈರಲ್! | Janata news
ಬಳ್ಳಾರಿ : ಲೆಕ್ಕಾಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ರೊಮಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬಳ್ಳಾರಿಯ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಈ ಒಂದು ಸಂಗತಿ ಬೆಳಕಿಗೆ ಬಂದಿದೆ.
ಬಳ್ಳಾರಿಯ ಜಿಲ್ಲಾ ಪಂಚಾಯಿತಿಯಲ್ಲಿ ಒಂದು ವರ್ಷದ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳಾ ಸಿಬ್ಬಂದಿಯೊಂದಿಗೆ ಮುತ್ತಿನಾಟ ನಡೆಸುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿದೆ.
ಲೆಕ್ಕ ಅಧೀಕ್ಷಕ (ಪ್ರಭಾರಿ ಲೆಕ್ಕಾಧಿಕಾರಿ) ಸಂಪತಕುಮಾರ್ ಹಾಗೂ ಮಹಿಳಾ ಸಿಬ್ಬಂದಿಯೊಬ್ಬರು ಕಚೇರಿಯಲ್ಲೇ ತುಂಬಾ ಸಲುಗೆಯಿಂದ ಇದ್ದುದ್ದನ್ನು ಹಾಗೂ ಇಬ್ಬರು ಚುಂಬಿಸುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದು ಅಸ್ತ್ರವಾಗಿ ಇಟ್ಟುಕೊಂಡಿದ್ದರು.
ಸಂಪತ್ ಕುಮಾರ್ ವಿರುದ್ಧ ಈಗಾಗಲೇ ಕೆಲ ಮಹಿಳಾ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ಕೂಡ ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ ವಿಡಿಯೋ ಇಟ್ಟುಕೊಂಡು ಅಧಿಕಾರಿಯನ್ನು ಹೆದರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕೊನೆಗೆ ಅಧಿಕಾರಿ ಕೆಲಸ ಮಾಡಿಕೊಡಲು ನಿರ್ಲಕ್ಷಿಸಿದ್ದಕ್ಕೆ ವಿಡಿಯೋ ವೈರಲ್ ಮಾಡಿರುವ ಆರೋಪ ಕೇಳಿಬಂದಿದೆ.