ಕಾರುಗಳ ಮುಖಾಮುಖಿ ಡಿಕ್ಕಿ: ಮೂವರು MBBS ವಿದ್ಯಾರ್ಥಿಗಳ ಸಾವು, ಇಬ್ಬರಿಗೆ ಗಂಭೀರ ಗಾಯ! | Janata news
ರಾಯಚೂರು : ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ಮಂತ್ರಾಲಯ ರಸ್ತೆಯ ಮಂಜರ್ಲಾ ಕ್ರಾಸ್ ಬಳಿ ಸಂಭವಿಸಿದೆ.
ಅಭಿಷೇಕ್, ಗಣೇಶ್, ಬಸವರಾಜ್ ಮೃತ ದುರ್ದೈವಿಗಳು. ರಾಯಚೂರಿನ ನವೋದಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಸಿದ್ಧಾರ್ಥ, ಭೀಮರೆಡ್ಡಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯರಗೇರಾದಿಂದ ಬರುತ್ತಿದ್ದ ಕಾರು ಮತ್ತು ರಾಯಚೂರಿನಿಂದ ಹೋಗುತ್ತಿದ್ದ ಕಾರಿಗಳೆರಡರ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
RELATED TOPICS:
English summary :Accident in Rayachuru