ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಯಜುವೇಂದ್ರ ಚಹಾಲ್! | Janata news
ಗುರುಗ್ರಾಮ : ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮಂಗಳವಾರ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಅವರೊಂದಿಗೆ ಕರ್ಮಾ ಲೇಕ್ ರಸಾರ್ಟ್ನಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.
ಗುರುಗ್ರಾಮದ ಕರ್ಮ ಲೇಕ್ ರೆಸಾರ್ಟ್ ನಲ್ಲಿ ಹಿಂದೂ ಸಂಪ್ರದಾಯದಂತೆ ಚಹಾಲ್ ಅವರು ಧನಶ್ರೀ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಟ್ವಿಟರ್ ಮೂಲಕ ತಮ್ಮ ವಿವಾಹ ಶುಭ ಸುದ್ಧಿಯನ್ನು ಚಹಾಲ್ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಚಹಾಲ್ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು 22.12,20202 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಹೊಸದಾಗಿ ಮದುವೆಯಾದವರ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಲ್ಲಿ ಧನಶ್ರೀ ಮರೂನ್ ಲೆಹೆಂಗಾ ಧರಿಸಿದರೆ, ಚಹಲ್ ದಂತ ಶೆರ್ವಾನಿ ಯನ್ನು ಮರೂನ್ ಪೇಟದಿಂದ ಅಲಂಕರಿಸಿದ್ದಾರೆ.