ಬೈಕಿಗೆ ಕಾರು ಡಿಕ್ಕಿ ಭೀಕರ ಅಪಘಾತ: ತಂದೆ ಮಗಳು ಸ್ಥಳದಲ್ಲೇ ಸಾವು | Janata news
ವಿಜಯಪುರ: : ಕಾರು ಬೈಕ್ ಡಿಕ್ಕಿಯಾಗಿ ತಂದೆ ಮತ್ತು ಮಗಳು ಸಾವನ್ನಪ್ಪಿದ ದುರ್ಘಟನೆ ಕೋಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಬಬಲೇಶ್ವರ ತಾಲ್ಲೂಕಿನ ಮದಗುಣಕಿ ಗ್ರಾಮದ ಧರೇಪ್ಪ ಅರವಿಂದ ಶಿವನ್ನವರ(28) ಮತ್ತು ಆತನ 3 ವರ್ಷದ ಮಗಳು ಸಾನ್ವಿಕಾ ಎಂದು ಗುರುತಿಸಲಾಗಿದೆ.
ಮದಗುಣಕಿ ಗ್ರಾಮದ ಅರವಿಂದ ಕುಟುಂಬ ಕಳೆದ ಕೆಲ ವರ್ಷಗಳಿಂದ ಕೊಲ್ಹಾರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿತ್ತು, ಯುಕೆಪಿ ಕ್ಯಾಂಪ್ ನಿಂದ ಬಸವನಬಾಗೇವಾಡಿಗೆ ಹೋಗುವ ಮಾರ್ಗದ ಬನ್ನಿಹಳ್ಳದ ಹತ್ತಿರ ಬೈಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿಯಾಗಿದೆ. ಅಪಘಾತವಾಗುತ್ತಿದ್ದಂತೆ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಕೋಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Accident in Vijayapura