ಹೊಸಪೇಟೆ ಸಬ್ ರಿಜಿಸ್ಟರ್ ಮನೆ ಮತ್ತು ಕಚೇರಿ ಮನೆ ಎಸಿಬಿ ಅಧಿಕಾರಿಗಳಿಂದ ದಾಳಿ! | Janata news
ಹೊಸಪೇಟೆ : ಹೊಸಪೇಟೆಯ ಸಬ್ ರಿಜಿಸ್ಟ್ರಾರ್ ಪ್ರಭಾಕರ ಅವರ ಕಚೇರಿ ಮತ್ತು ಮನೆಗಳ ಮೇಲೆ ಇಂದು ಬೆಳಗ್ಗೆಯೇ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಕ್ರಮ ಅಸ್ತಿ ಗಳಿಕೆ ಆರೋಪದ ಜೊತೆ ಅನಧಿಕೃತವಾಗಿ ಕೆಲ ಆಸ್ತಿಗಳನ್ನು ರಿಜಿಸ್ಟರ್ ಮಾಡಿಕೊಟ್ಟಿರೋ ಆರೋಪ ರಿಜಿಸ್ಟ್ರಾರ್ ಪ್ರಭಾಕರ ಅವರ ಮೇಲಿದೆ.
ಹೊಸಪೇಟೆಯಲ್ಲಿರೋ ಕಚೇರಿ ಮನೆ ಮತ್ತು ಕೂಡ್ಲಿಗಿ ತಾಲೂಕಿನ ಮನೆ ಮತ್ತು ಫಾರ್ಮ್ ಹೌಸ್ನಲ್ಲಿ ಏಕಕಾಲದಲ್ಲೇ ನಾಲ್ಕು ಕಡೆ ದಾಳಿ ನಡೆಸಿ ಸಂಬಂಧಪಟ್ಟ ದಾಖಲೆಗಳು, ಸಾಕ್ಷ್ಯಗಳಿಗಾಗಿ ಅಧಿಕಾರಿಗಳ ತಂಡ ಶೋಧಕಾರ್ಯ ನಡೆಸಿದೆ.
RELATED TOPICS:
English summary :Ballari