ಯಡಿಯೂರಪ್ಪ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯತ್ನಾಳ್: ಬ್ಲ್ಯಾಕ್​ಮೇಲ್​ ಮಾಡಿದ ಮೂವರಿಗೆ ಸಚಿವ ಸ್ಥಾನ! | Janata news

13 Jan 2021
350
Yatnal

ವಿಜಯಪುರ : ಬ್ಲ್ಯಾಕ್​ಮೇಲ್ ಮಾಡುವ ಮೂವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನವನ್ನು ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬ್ಲಾಕ್ ಮೇಲ್ ಮಾಡಿದವರಿಗೆ, ಇನ್ನೂ ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ. ಕೆಲವರು ಸಿಡಿ ತೋರಿಸಿ ಸಿಎಂ ಅವರನ್ನು ಬೆದರಿಸಿ ಸಚಿವ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಲಿಂಗಾಯತ ಸಮುದಾಯದ ಮರ್ಯಾದೆ ತೆಗೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

3 ಸಚಿವ ಸ್ಥಾನ ಬ್ಲ್ಯಾಕ್‌ಮೇಲ್ ಮಾಡಿ ಪಡೆದುಕೊಂಡಿದ್ದಾರೆ. ಇದೇ ಮೂವರು ಈ ಹಿಂದೆ ನನ್ನನ್ನು ಭೇಟಿಯಾಗಿದ್ದರು. ನಾವೆಲ್ಲಾ ಸೇರಿ ಬಿಎಸ್‌ವೈರನ್ನು ಕೆಳಗಿಳಿಸೋಣ ಎಂದಿದ್ದರು. ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು ಎಂದರು.

ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಸವಾಲ್​ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಅವರು, ಕುಟುಂಬ ರಾಜಕಾರಣ ವಿರೋಧಿಸುತ್ತಾರೆ. ಹಾಗೇ ಕುಟುಂಬ ರಾಜಕಾರಣ ನಿರ್ಮೂಲನೆ ಮಾಡುವದಾದರೆ, ಮೊದಲು ಬಿಎಸ್​ ಯಡಿಯೂರಪ್ಪ ಕುಟುಂಬದಿಂದಲೇ ಆರಂಭಿಸಲಿ ಎಂದರು.

ವೀರಶೈವ ಲಿಂಗಾಯತ ಮಠಗಳಿಗೆ ಹಣ ನೀಡಿ ನನ್ನ ಕೆಳಗಿಳಿಸಿದರೆ ಕೇಂದ್ರದ ವಿರುದ್ಧ ಬಂಡೇಳುವಂತೆ ಯಡಿಯೂರಪ್ಪ ಯೋಜನೆ ಮಾಡಿದ್ದಾರೆ. ಸಂಕ್ರಮಣದ ಉತ್ತರಾಯಣದ ಬಳಿಕ ಸಿಎಂ ಯಡಿಯೂರಪ್ಪ ಅಧಃಪತನ ಆರಂಭ ಎಂದು ಸಿಎಂ ವಿರುದ್ಧ ಪ್ರಹಾರ ಬೀಸುವ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

RELATED TOPICS:
English summary :Yatnal

ಕರ್ನಾಟಕದ ಮರಾಠಿ ಪ್ರದೇಶವನ್ನು ವಶಪಡಿಸಿಕೊಳ್ಳುವುದಾಗಿ ಮಹಾರಾಷ್ಟ್ರ ಸಿಎಂ ಠಾಕ್ರೆ ವಿವಾದಾತ್ಮಕ ಹೇಳಿಕೆ
ಕರ್ನಾಟಕದ ಮರಾಠಿ ಪ್ರದೇಶವನ್ನು ವಶಪಡಿಸಿಕೊಳ್ಳುವುದಾಗಿ ಮಹಾರಾಷ್ಟ್ರ ಸಿಎಂ ಠಾಕ್ರೆ ವಿವಾದಾತ್ಮಕ ಹೇಳಿಕೆ
ಬ್ರಿಟನ್ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಗೆ ಯುಕೆ ಪ್ರಧಾನಿ ಆಹ್ವಾನ
ಬ್ರಿಟನ್ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಗೆ ಯುಕೆ ಪ್ರಧಾನಿ ಆಹ್ವಾನ
ಇದು ಡಬಲ್ ಎಂಜಿನ್ ಸರ್ಕಾರ: ಅಮಿತ್ ಷಾ ಹೇಳಿದ ಆ ಎರಡು ಎಂಜಿನ್ ಯಾವುದು?
ಇದು ಡಬಲ್ ಎಂಜಿನ್ ಸರ್ಕಾರ: ಅಮಿತ್ ಷಾ ಹೇಳಿದ ಆ ಎರಡು ಎಂಜಿನ್ ಯಾವುದು?
ದಿ ಸುರೇಶ ಅಂಗಡಿ ನಿವಾಸಕ್ಕೆ ಅಮಿತ್‌ ಶಾ ಭೇಟಿ!
ದಿ ಸುರೇಶ ಅಂಗಡಿ ನಿವಾಸಕ್ಕೆ ಅಮಿತ್‌ ಶಾ ಭೇಟಿ!
ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ: ಸುಧಾಕರ್
ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ: ಸುಧಾಕರ್
ಕೋವಿಡ್-19 : ರಾಜ್ಯದಲ್ಲಿಂದು 584 ಹೊಸ ಪ್ರಕರಣಗಳು, 4 ಸಾವು, 676 ಮಂದಿ ಡಿಸ್ಚಾರ್ಜ್
ಕೋವಿಡ್-19 : ರಾಜ್ಯದಲ್ಲಿಂದು 584 ಹೊಸ ಪ್ರಕರಣಗಳು, 4 ಸಾವು, 676 ಮಂದಿ ಡಿಸ್ಚಾರ್ಜ್
ಭದ್ರಾವತಿ : ಕ್ಷಿಪ್ರ ಕಾರ್ಯ ಪಡೆ(ರಾಪಿಡ್ ಆಕ್ಷನ್ ಫೋರ್ಸ್) ಘಟಕದ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಷಾ
ಭದ್ರಾವತಿ : ಕ್ಷಿಪ್ರ ಕಾರ್ಯ ಪಡೆ(ರಾಪಿಡ್ ಆಕ್ಷನ್ ಫೋರ್ಸ್) ಘಟಕದ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಷಾ
ಬೆಂಗಳೂರಿನಲ್ಲಿ ಫೆ.3ರಿಂದ ಏರ್ ಶೋ: ಬಿಬಿಎಂಪಿಯಿಂದ ಮಾಂಸ ಮಾರಾಟ ನಿಷೇಧಿಸಿ ಆದೇಶ
ಬೆಂಗಳೂರಿನಲ್ಲಿ ಫೆ.3ರಿಂದ ಏರ್ ಶೋ: ಬಿಬಿಎಂಪಿಯಿಂದ ಮಾಂಸ ಮಾರಾಟ ನಿಷೇಧಿಸಿ ಆದೇಶ
ವ್ಯಾಕ್ಸಿನೇಷನ್ ಡ್ರೈವ್ : ಸರ್ಕಾರದ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್ಸ್
ವ್ಯಾಕ್ಸಿನೇಷನ್ ಡ್ರೈವ್ : ಸರ್ಕಾರದ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್ಸ್
ಲಸಿಕೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಲಸಿಕೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಆಪರೇಷನ್‌ ಕಮಲಕ್ಕೆ ಸಾಲ: ರಮೇಶ್ ಜಾರಕಿಹೊಳಿ ಆರೋಪದ ಕುರಿತು ತನಿಖೆಯಾಗಲಿ: ಸಿದ್ದರಾಮಯ್ಯ ಆಗ್ರಹ
ಆಪರೇಷನ್‌ ಕಮಲಕ್ಕೆ ಸಾಲ: ರಮೇಶ್ ಜಾರಕಿಹೊಳಿ ಆರೋಪದ ಕುರಿತು ತನಿಖೆಯಾಗಲಿ: ಸಿದ್ದರಾಮಯ್ಯ ಆಗ್ರಹ
ಅಮಿತ್ ಶಾ ರಾಜ್ಯಕ್ಕೆ ಆಗಮನ: ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿಎಂ
ಅಮಿತ್ ಶಾ ರಾಜ್ಯಕ್ಕೆ ಆಗಮನ: ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿಎಂ

ನ್ಯೂಸ್ MORE NEWS...