ಮಂಗಳೂರು ವಿಮಾನ ನಿಲ್ದಾಣದಲ್ಲಿ 1.09 ಕೋಟಿ ರೂ. ಮೌಲ್ಯದ ಚಿನ್ನ ವಶ: ಇಬ್ಬರ ಸೆರೆ | Janata news
ಮಂಗಳೂರು : ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಂಐಎ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿ, ಅವರಿಂದ ಸುಮಾರು 1.09 ಕೋಟಿ ರೂ. ಮೌಲ್ಯದ 2.15 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ (37 ವ) ಹಾಗೂ ಮೊಹಮ್ಮದ್ ಶೋಹೈಬ್ ಮುಗು (31 ವ) ಬಂಧಿತ ಆರೋಪಿಗಳು.
ಗುಪ್ತಚರ ಮತ್ತು ಪ್ರಯಾಣಿಕರ ವಿವರಗಳ ಆಧಾರದ ಮೇಲೆ ಕಸ್ಟಮ್ಸ್ ಸಿಬ್ಬಂದಿ ಕೇರಳದ ಕಾಸರಗೋಡಿನ ಸ್ಥಳೀಯರಾದ ಫೈಜಲ್ ತೊಟ್ಟಿ ಮೆಲ್ಪಾರಂಬಾ (37) ಮತ್ತು ಮೊಹಮ್ಮದ್ ಶುಹೈಬ್ ಮುಗು (31) ಅವರನ್ನು ತಡೆದಿದ್ದಾರೆ ಎಂದು ಕಸ್ಟಮ್ಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತರಿಬ್ಬರ ಶೋಧ ನಡೆಸಿದಾಗ ತಮ್ಮ ಒಳ ಉಡುಪುಗಳಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಚಿ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, 1.09 ಕೋಟಿ ರೂ.ಗಳ ಮೌಲ್ಯದ 24 ಕೆ ಶುದ್ಧತೆಯ ಒಟ್ಟು 2.15 ಕೆಜಿಯಷ್ಟು ಚಿನ್ನ ವಶಪಡಿಸಿಕೊಳ್ಳಲಾಗಿದೆ.