ನೈಜೀರಿಯನ್ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ಗಳ ಬಂಧನ, 15 ಲಕ್ಷ ಮೌಲ್ಯದ ಡ್ರಗ್ಸ್ ವಶ! | Janata news
ಬೆಂಗಳೂರು : ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನೆಡಸಿ ನೈಜೀರಿಯನ್ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ವಿನ್ಸೆಂಟ್ ಹಾಗೂ ಜಾನ್ ಬಂಧಿತ ವಿದೇಶಿ ಆರೋಪಿಗಳಾಗಿದ್ದು, ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ಸ್ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಬರೊಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಕ್ಸ್ಟಸಿ ವಶಕ್ಕೆ ಪಡೆಯಲಾಗಿದೆ.
ಮೂಲತಃ ನೈಜಿರೀಯನ್ ದೇಶದವರಾದ ಆರೋಪಿಗಳು, ವೀಸಾ ಅವಧಿ ಮುಗಿದಿದ್ದರು ಬೆಂಗಳೂರಿನಲ್ಲೆ ಉಳಿದುಕೊಂಡಿದ್ದರು ಎನ್ನಲಾಗಿದೆ.
RELATED TOPICS:
English summary :Bangalore