ಪತ್ನಿ ಸತ್ತ 3 ತಿಂಗಳಿಗೆ ಮತ್ತೊಂದು ಮದ್ವೆ ಆಗಿ 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ! | Janata news
ಚಿಕ್ಕಬಳ್ಳಾಪುರ : 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲೂಕಿನ ಬ್ರಾಹ್ಮಣರ ಹಳ್ಳಿಯಲ್ಲಿ ನಡೆದಿದೆ.
ರವಿ(35) ಹಾಗೂ ಇವರ ಮಗು ಸುಷ್ಮಾ(9 ತಿಂಗಳು) ಮೃತ ದುರ್ದೈವಿಗಳು.
ರವಿ ಬ್ರಾಹ್ಮರಣಹಳ್ಳಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ. 3 ತಿಂಗಳ ಹಿಂದೆ ಅನಾರೋಗ್ಯದಿಂದ ರವಿ ಎಂಬುವವರ ಹೆಂಡತಿ ಮೃತಪಟ್ಟಿದ್ದರು. 15 ದಿನಗಳ ಹಿಂದೆ ಬೇರೆ ಮದುವೆ ಸಹ ಆಗಿದ್ದ ರವಿ ಕಳೆದ ರಾತ್ರಿಯಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು.
ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದ ರವಿ ಹಾಗೂ ಮಗು ಇಂದು ಬೆಳಗ್ಗೆ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Chikkaballapura