Tue,May14,2024
ಕನ್ನಡ / English

ಪೆರ್ಡೂರು ಮೇಳದ ವೇದಿಕೆಯಲ್ಲಿ ಯಕ್ಷಗಾನ ಹಿರಿಯ ಕಲಾವಿದರಿಗೆ ಸನ್ಮಾನ

25 Jan 2018
519

ಕುಮಟಾ : ಕುಮಟಾ ಜಾತ್ರೆಯ ಪ್ರಯುಕ್ತ ಇಲ್ಲಿನ ಮಣಕಿ ಮೈದಾನದಲ್ಲಿ ಕಲಾಗಂಗೋತ್ರಿ, ಕುಮಟಾ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಏರ್ಪಡಿಸಿದ ಪೆರ್ಡೂರು ಮೇಳದ ಯಕ್ಷಗಾನ ವೇದಿಕೆಯಲ್ಲಿ ಯಕ್ಷಗಾನ ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಂಘಟನಾಕಾರರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಮತ್ತು ಕಲಾಗಂಗೋತ್ರಿ ಸಂಸ್ಥಾಪಕ ದಿ|| ದುರ್ಗಾದಾಸ ಗಂಗೊಳ್ಳಿಯವರ ಸ್ಮರಣಾರ್ಥ ಅಶಕ್ತ ಕಲಾವಿದರಿಗೆ ನೀಡಲಾಗುವ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಯಕ್ಷಗಾನ ಹಿರಿಯ ಭಾಗವತರಾದ ಶ್ರೀ ಕೃಷ್ಣ ಮಾಣಿ ಆಗೇರ, ಮಾಸ್ಕೇರಿ ಇವರಿಗೆ ಹಾಗೂ “ಕಲಾಗಂಗೋತ್ರಿ ಪ್ರಶಸ್ತಿ”ಯನ್ನು ಹಿರಿಯ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಕೃಷ್ಣ ಯಾಜಿ ಬಳ್ಕೂರು ಇವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನದ ಹಿರಿಯ ಸಂಘಟನಾಕಾರ ಶ್ರೀ ಅಶೋಕ ಭಟ್ಟ ಕತಗಾಲ ಇವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ 26 ವರ್ಷಗಳಿಂದ ನಿರಂತರವಾಗಿ ಪೆರ್ಡೂರು ಮೇಳದ ಯಕ್ಷಗಾನ ಸಂಘಟಿಸುತ್ತಾ ಬಂದಿರುವ ಕಲಾಗಂಗೋತ್ರಿಯ ಅಧ್ಯಕ್ಷ ‘ಯಕ್ಷಸಿರಿ’ ಖ್ಯಾತಿಯ ಶ್ರೀಧರ ನಾಯ್ಕ ಕುಮಟಾ ಇವರಿಗೆ ಪೆರ್ಡೂರು ಮೇಳದ ವತಿಯಿಂದ ಮೇಳದ ಯಜಮಾನರಾದ ಶ್ರೀ ಕರುಣಾಕರ ಶೆಟ್ಟಿ ಹಾಗೂ ಮೇಳದ ಎಲ್ಲಾ ಕಲಾವಿದರು ಸೇರಿ ಸನ್ಮಾನಿಸಿದರು.

ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಆರ್.ಟಿ. ಹೆಗಡೆಯವರು ಮಾತನಾಡಿ, ಯಕ್ಷಗಾನ ಕಲೆಯು ಪುರಾಣ ಕಥಾನಕಗಳ ಪ್ರದರ್ಶನದ ಮೂಲಕ ಜೀವನದ ಮೌಲ್ಯವನ್ನು ಬೋಧಿಸುತ್ತಿರುವ ಶ್ರೇಷ್ಠ ಕಲೆಯಾಗಿದೆ. ಉತ್ತಮ ಗುಣ-ನಡತೆಯನ್ನು ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಉತ್ತಮ ಸಮಾಜದ ನಿರ್ಮಾಣ ಮಾಡಿಕೊಳ್ಳಬೇಕಾದ ಅಗತ್ಯವಿದೆ ಹಾಗೂ ಕಲಾಗಂಗೋತ್ರಿ ನಿಸ್ವಾರ್ಥದಿಂದ ಕಲಾಸೇವೆ ಗೈಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
sirsi
ಅಧ್ಯಕ್ಷತೆ ವಹಿಸಿದ್ದ ಕಲಾಗಂಗೋತ್ರಿಯ ಅಧ್ಯಕ್ಷ ಶ್ರೀಧರ ನಾಯ್ಕ ಇವರು ಪೆರ್ಡೂರು ಮೇಳದ ವತಿಯಿಂದ ಸನ್ಮಾನ ಸ್ವೀಕರಿಸಿ, ಯಕ್ಷಗಾನ ಸಂಘಟನೆಯ ಹಾದಿಯಲ್ಲಿ ಸಹಕರಿಸಿದ ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ, ಕಲಾವಿದ ರಮೇಶ ಭಂಡಾರಿ, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಕಲಾಗಂಗೋತ್ರಿ ಸದಸ್ಯರನ್ನು ಹಾಗೂ ಸರ್ವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

“ಕಲಾಗಂಗೋತ್ರಿ ಪ್ರಶಸ್ತಿ” ಸ್ವೀಕರಿಸಿ ಖ್ಯಾತ ಹಿರಿಯ ಕಲಾವಿದರಾದ ಶ್ರೀ ಕೃಷ್ಣ ಯಾಜಿಯವರು ಮಾತನಾಡಿ, ತನ್ನ 44 ವರ್ಷಗಳ ಯಕ್ಷ ಬದುಕಿನಲ್ಲಿ ಸಾಲಿಗ್ರಾಮ ಮೇಳದ ಕಲಾವಿದನಾದ ನಾನು ಪ್ರಥಮ ಬಾರಿಗೆ ಪೆರ್ಡೂರು ಮೇಳದ ವೇದಿಕೆಯೇರಿ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ಯಾವುದೇ ರಾಜಕೀಯ ಅಧಿಕಾರವಿಲ್ಲದೆಯೂ ಸಮಾಜ ಸೇವೆ ಸಾಧ್ಯ ಎಂಬುದಕ್ಕೆ ದಿ|| ದುರ್ಗಾದಾಸ ಗಂಗೊಳ್ಳಿಯವರೇ ಸಾಕ್ಷಿ” ಕಲಾವಿದರ ಅಳಲು ಸರ್ಕಾರಕ್ಕೆ ತಲುಪುವಂತಾದರೆ ಮಾತ್ರ ಕಲಾವಿದರ ಬಾಳು ಬೆಳಗಲು ಸಾಧ್ಯ ಎಂದರು. ಸನ್ಮಾನ ಸ್ವೀಕರಿಸಿ ಹಿರಿಯ ಸಂಘಟನಾಕಾರ ಅಶೋಕ ಭಟ್ಟ ಕತಗಾಲ ಅನಿಸಿಕೆ ವ್ಯಕ್ತ ಪಡಿಸಿದರು.
sirsi
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸುವ ದಿಶೆಯಲ್ಲಿನ ಎಲ್ಲಾ ಪ್ರಯತ್ನಗಳಿಗೆ ಸದಾ ನನ್ನ ಸಹಕಾರ ಇದೆ ಎಂದರು. ಯುವ ಮುಖಂಡ, ಉದ್ದಿಮೆದಾರರಾದ ರವಿಕುಮಾರ ಶೆಟ್ಟಿಯವರು ಮಾತನಾಡಿ, ಕಲಾವಿದರ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಶಾಸಕರ ಮೂಲಕ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಯುವ ಮುಖಂಡ ಸೂರಜ ನಾಯ್ಕ ಸೋನಿಯವರು ಮಾತನಾಡಿ, ಯುವ ಸಂಘಟನೆಯ ಮೂಲಕ ಸಾಮಾಜಿಕ ಕಳಕಳಿಯಿಂದ ಹೋರಾಡಿದ ದಿ|| ದುರ್ಗಾದಾಸ ಗಂಗೊಳ್ಳಿಯವರ ತತ್ವ ಆದರ್ಶಗಳೇ ನನಗೆ ಪ್ರೇರಣೆ ಎಂದರು. ‘ಯಕ್ಷಸಿರಿ’ ಶ್ರೀಧರ ನಾಯ್ಕರಿಗೆ ಸನ್ಮಾನಿಸಿ ಮಾತನಾಡಿದ ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ ಮಾತನಾಡಿ, ಯಕ್ಷಗಾನದ ಯಶಸ್ಸಿಗೆ ಸಂಘಟಕರೇ ಕಾರಣ. ಕಳೆದ 26 ವರ್ಷಗಳಿಂದ ತಮ್ಮ ಮೇಳದ ಯಕ್ಷಗಾನ ಸಂಘಟಿಸುತ್ತಾ ಬಂದಿರುವುದಕ್ಕೆ ಶ್ರೀಧರ ನಾಯ್ಕರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಉದ್ದಿಮೆದಾರರಾದ ಶ್ರೀ ಗಜಾನನ ಶಾಸ್ತ್ರಿ ಬರಗದ್ದೆ ಇನ್ನಿತರರು ಉಪಸ್ಥಿತರಿದ್ದರು.

ಕಲಾಗಂಗೋತ್ರಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ. ಪೈ ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ ಭಟ್ಟ ಬಗ್ಗೋಣ ವಂದಿಸಿದರು. ಎಸ್.ಟಿ. ಭಟ್ಟ ನಿರೂಪಿಸಿದರು. ಎಂ.ಟಿ. ನಾಯ್ಕ, ಗಣೇಶ ಪಟಗಾರ, ವಸಂತ ಪಂಡಿತ ಹಾಗೂ ಖ್ಯಾತ ಕಲಾವಿದ ಥಂಡಿ ಶ್ರೀಪಾದ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಕಲಾಗಂಗೋತ್ರಿಯ ಎಲ್ಲಾ ಸದಸ್ಯರು ಸಹಕರಿಸಿದರು. ನಂತರ ಪೆರ್ಡೂರು ಮೇಳದಿಂದ “ಅಹ್ಮಂ ಬ್ರಹ್ಮಾಸ್ಮಿ” ಯಕ್ಷಗಾನ ಜರುಗಿತು.

English summary :

ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ
ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ
ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ... ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ - ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ... ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ - ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
 ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ  ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ

ನ್ಯೂಸ್ MORE NEWS...