ಸಿಡಿ ಲೇಡಿ 2ನೇ ಆಡಿಯೋ ಲೀಕ್: ಡಿ ಕೆ ಶಿವಕುಮಾರ್ ಹೇಳಿದಂಗ್ ಕೇಳ್ಬೇಕು, ರೊಕ್ಕ ಕೊಟ್ಟು ಗೋವಾಗೆ ಕಳುಹಿಸ್ತಿದ್ದಾರೆ | Janata news
ಬೆಂಗಳೂರು : ಡಿ ಕೆ ಶಿವಕುಮಾರ್ ನನ್ನನ್ನು ಭೇಟಿಯಾಗಿ ಮಾತನಾಡಿದ್ದಾರೆ. ಅವರೇ ಹಣ ಕೊಟ್ಟು ಗೋವಾಗೆ ಕಳುಹಿಸುತ್ತಿದ್ದಾರೆ ಎಂದು ಸಿಡಿ ಲೇಡಿ ತನ್ನ ಸಹೋದರನೊಂದಿಗೆ ಮಾತನಾಡಿದ್ದಾಳೆ ಎನ್ನಲಾದ ಮತ್ತೊಂದು 2ನೇ ಆಡಿಯೋ ಲೀಕ್ ಆಗಿದೆ.
ಆಡಿಯೋದಲ್ಲಿ ಯುವತಿಯು ನಾನು ಡಿ.ಕೆ ಶಿವಕುಮಾರ್ ಹೇಳಿದ ಹಾಗೇ ಕೇಳಬೇಕು. ಎಲ್ಲಿಗೂ ಹೋಗಬಾರದು ಎಂದಿದ್ದಾಳೆ.
ಈ ವೇಳೆ ಯುವತಿ ಸಹೋದರ, ನಿನ್ನನ್ನು ಕೈಬಿಟ್ಟು ಬಿಡುತ್ತಾರೆ. ಇದೆಲ್ಲ ಬೇಡ ಊರಿಗೆ ಬಾ ಎಂದು ಕರೆದಿದ್ದಾನೆ.
ಈ ವೇಳೆ ಯುವತಿ, ಹಾಗೆಲ್ಲ ಆಗೋದಿಲ್ಲ. ನನ್ನ ಮೊಬೈಲ್ ಸಹ ಕಸಿದುಕೊಂಡು ಬೇಸಿಕ್ ಮೊಬೈಲ್ ನೀಡಿದ್ದಾರೆ. ನನ್ನೊಂದಿಗೆ ಆಕಾಶ್ ಜತೆಗೆ ಏಳೆಂಟು ಜನ ಬರ್ತಿದ್ದಾರೆ. ನೀನು ವಿಷಯವನ್ನು ಯಾರ ಬಳಿಯೂ ಮಾತನಾಡಬೇಡ ಎಂದು ಹೇಳಿರುವ ಆಡಿಯೋ ಈಗ ಸಿಡಿ ಕೇಸ್ಗೆ ಹೊಸ ತಿರುವು ನೀಡುತ್ತಿದೆ.