ರಾಮನಗರ ಜೈಲಿನ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸ್ ದಾಳಿ: ಕೈದಿಗಳಿಂದ ನಿಷೇಧಿತ ಮಾದಕ ವಸ್ತು, ಮೊಬೈಲ್ ವಶ | Janata news
ರಾಮನಗರ : ಬೆಳ್ಳಂಬೆಳಿಗ್ಗೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಿರ್ಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ರಾಮನಗರ ಎಸ್ಪಿ ಎಸ್.ಗಿರೀಶ್ ನೇತೃತ್ವದಲ್ಲಿ ಡಿವೈಎಸ್ಪಿ, ಸಿಪಿವೈ, ಪಿಎಸ್ಐಗಳು ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸರ ತಂಡ ಶೋಧ ನಡೆಸಿದ್ದಾರೆ.
ಕಾರಾಗೃಹದಲ್ಲಿ 54 ಸಾವಿರ ಹಣ, 5 ಮೊಬೈಲ್ ಫೋನ್, 6 ಸಿಮ್ ಕಾರ್ಡುಗಳು, 70ಕ್ಕೂ ಹೆಚ್ಚು ಸಿಗರೇಟ್ ಮತ್ತು ಬೀಡಿ ಪ್ಯಾಕೇಟ್ ಗಳು, ಗುಟ್ಕಾ ಪ್ಯಾಕೇಟ್, ಬ್ಲೇಡ್, ಚಾಕು, ಸೀಜರ್ ಹಾಗೂ ಇತರೆ ವಸ್ತುಗಳು ಸಹ ಪರಿಶೀಲನೆ ವೇಳೆ ಸಿಕ್ಕಿದೆ ಎನ್ನಲಾಗಿದೆ..
RELATED TOPICS:
English summary :Ramanagar