ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ತಾಯಿ, ಮಗನಿಗೆ ಗಾಯ, ಟ್ರಾಫಿಕ್ ಪೊಲೀಸರ ಹಲ್ಲೆಗೆ ಯತ್ನ! | ಜನತಾ ನ್ಯೂಸ್
ಬಳ್ಳಾರಿ : ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ಸವಾರನೊಬ್ಬ ಬಿದ್ದಿದ್ದು, ಆತನಿಗೂ ಹಾಗೂ ಆತನ ತಾಯಿಗೆ ಗಾಯಗಳಾಗಿವೆ.
ಪೊಲೀಸರು ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಾಲನೆ ಮಾಡುವ ಸವಾರರಿಗೆ ದಂಡ ಹಾಕುತ್ತಾ ನಿಂತಿದ್ದರು. ಈ ಸಂದರ್ಭದಲ್ಲಿ ತಾಯಿ-ಮಗ ಬೈಕಿನಲ್ಲಿ ಬರುತ್ತಿದ್ದರು. ಬೈಕ್ ಸವಾರ ಪೊಲೀಸರನ್ನ ನೋಡುತ್ತಿದ್ದಂತೆ ಫೈನ್ ಹಾಕ್ತಾರೆ ಅಂತ ಬೈಕ್ ಜೋರಾಗಿ ಚಾಲನೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಸ್ಕಿಡ್ ಆಗಿ ಬಿದ್ದು ತಾಯಿ ಮಗ-ಗಾಯ ಮಾಡಿಗೊಂಡಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ಪೊಲೀಸರದ್ದೇ ತಪ್ಪು ಎಂದು ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.
ತಕ್ಷಣವೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನಂತರ ಸಾರ್ವಜನಿಕರನ್ನು ಸಮಾಧಾನ ಪಡಿಸಿ, ಗುಂಪುಗೂಡಿದ್ದ ಜನರನ್ನು ಚದುರಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.