ವ್ಯಾಕ್ಸಿನ್ ತಗೊಂಡ ಚಾಮರಾಜನಗರ ಜಿಲ್ಲಾಧಿಕಾರಿಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂಸ್
ಚಾಮರಾಜನಗರ : ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಕೊರೊನಾ ಸೋಂಕು ತಗುಲಿದೆ.
ನೆಗಡಿ, ಶೀತ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ರವಿ ಅವರು ಆರ್.ಟಿ.ಪಿ.ಸಿ.ಆರ್ ಟೆಸ್ಟ್ಗೆ ಒಳಪಟ್ಟಿದ್ದರು. ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.
ಡಿ.ಸಿ ರವಿ ಅವರು ಕೋವಿಡ್ ಲಸಿಕೆಯ 2 ಡೋಸ್ಗಳನ್ನ ಪಡೆದಿದ್ದಾರೆ. ಫೆ. 8 ರಂದು ಮೊದಲ ಡೋಸ್ ಹಾಗೂ ಮಾರ್ಚ್ 8 ರಂದು 2ನೇ ಡೋಸ್ ಪಡೆದಿದ್ದರು. ಈಗ ಕರೊನಾ ಪಾಸಿಟಿವ್ ದೃಢಪಟ್ಟಿರುವುದರಿಂದ ಹೋಂ ಐಸೋಲೇಷನ್ನಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
RELATED TOPICS:
English summary :Chamarajanagara