ಪಾಕಿಸ್ತಾನ : ಉದ್ರಿಕ್ತ ಇಸ್ಲಾಮಿಸ್ಟ್ ಪ್ರತಿಭಟನಾಕಾರರ ಹತೋಟಿಗೆ ತರಲು ಅರೆಸೇನಾಪಡೆ ನಿಯೋಜನೆ | ಜನತಾ ನ್ಯೂಸ್
ಲಾಹೋರ್ : ಉದ್ರಿಕ್ತ ಇಸ್ಲಾಮಿಸ್ಟ್ ಪ್ರತಿಭಟನಾಕಾರರು ತಮ್ಮ ಮುಖಂಡನ ಬಂಧನವನ್ನು ವಿರೋಧಿಸಿ ಹಿಂಸಾತ್ಮಕ ಧರಣಿಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಪೂರ್ವ ಪಾಕಿಸ್ತಾನದ ಪ್ರಾಂತ್ಯದ ಪಂಜಾಬ್‌ನಲ್ಲಿ ಅರೆಸೈನಿಕ ಪಡೆಗಳನ್ನು ರಾತೋರಾತ್ರಿ ನಿಯೋಜಿಸಲಾಗಿದೆ.
ತೆಹ್ರಿಕ್-ಇ-ಲಬೈಕ್ ಪಾಕಿಸ್ತಾನ(ಟಿಎಲ್‌ಪಿ) ಸಂಘಟನೆಯ ಮುಖಂಡ ಸಾಡ್ ರಿಜ್ವಿ ಯನ್ನು ಸೋಮವಾರ ಲಾಹೋರ್‌ನಲ್ಲಿ ಬಂಧಿಸಲಾಯಿತು. ಟಿಎಲ್‌ಪಿ ಹೆಸರಿನಲ್ಲಿ ಇಸ್ಲಾಂ ಧರ್ಮದ ವಿರುದ್ಧ ಧರ್ಮನಿಂದೆಯ ಖಂಡನೆಯನ್ನು ತನ್ನ ಕೂಗಾಟವನ್ನಾಗಿ ಮಾಡಿಕೊಂಡಿರುವ ಈ ಕಟ್ಟರ್ ಇಸ್ಲಾಮಿಸ್ಟ್ ಗುಂಪು ಪ್ರತಿಭಟನೆಗಳಿಗೆ ಕರೆ ನೀಡಿತ್ತು.
ಬಳಿಕ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಏಪ್ರಿಲ್ 14ರಂದು ಭಯೋತ್ಪಾದನಾ ಕಾಯ್ದೆಯಡಿ ಆಮೂಲಾಗ್ರ ಇಸ್ಲಾಮಿಸ್ಟ್ ಪಕ್ಷ ಟಿಎಲ್‌ಪಿಯನ್ನು ನಿಷೇಧಿಸಿತು. ಬಳಿಕ ಅದರ ಬೆಂಬಲಿಗರು ಸತತ ಮೂರನೇ ದಿನವೂ ಸರ್ಕಾರದೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಈ ಘರ್ಷಣೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
1997 ರ ಭಯೋತ್ಪಾದನಾ ವಿರೋಧಿ ಕಾಯ್ದೆಯ ನಿಯಮ 11-ಬಿ ಅಡಿಯಲ್ಲಿ ತೆಹ್ರೀಕ್-ಇ-ಲಬೈಕ್ ಪಾಕಿಸ್ತಾನವನ್ನು(ಟಿಎಲ್‌ಪಿ) ನಿಷೇಧಿಸಲಾಗುತ್ತಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಮಾಧ್ಯಮಗಳಿಗೆ ತಿಳಿಸಿದರು. ಟಿಎಲ್‌ಪಿಯನ್ನು ನಿಷೇಧಿಸಲು ಪಂಜಾಬ್ ಸರ್ಕಾರ ಕಳುಹಿಸಿದ ಪ್ರಸ್ತಾಪಕ್ಕೆ ನಾನು ಅನುಮೋದನೆ ನೀಡಿದ್ದೇನೆ, ಎಂದು ಅವರು ಹೇಳಿದರು.
ಕಳೆದ ಎರಡು ದಿನಗಳಲ್ಲಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು 340 ಮಂದಿ ಗಾಯಗೊಂಡಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ.