4 ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ನಿಂದ ಬಿಳ್ಕೊಟ್ಟ ಐಎಎಫ್ ಮುಖ್ಯಸ್ಥ ಭಡೌರಿಯಾ | ಜನತಾ ನ್ಯೂಸ್
ಇಸ್ತ್ರೆಸ್ : ಭಾರತದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭಡೌರಿಯಾ ಅವರು ಇಂದು ಬುಧವಾರ ಫ್ರಾನ್ಸ್ನ ಮೆರಿಗ್ನಾಕ್-ಬೋರ್ಡೆಕ್ಸ್ ವಾಯುನೆಲದಿಂದ 4 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಬರಮಾಡಿ ಕೊಂಡಿದ್ದಾರೆ.
5ನೇ ಸಾಲಿನಲ್ಲಿ 4 ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ನಿಂದ ಹೊರಟು ತಡೆರಹಿತ ಹಾರಾಟದಲ್ಲಿ ಭಾರತ ತಲುಪಲಿದ್ದು, ಫ್ರೆಂಚ್ ವಾಯುಪಡೆ ಮತ್ತು ಯುಎಇ ಯಿಂದ ಆಗಸದಲ್ಲೇ ಇಂಧನ ತುಂಬಿಕೊಳ್ಳಲಿದೆ.
ಈ ಅತ್ಯಾಧುನಿಕ ಹಾಗೂ ವಿಶೇಷ ರಫೇಲ್ ಯುದ್ಧ ವಿಮಾನಗಳಿಗೆ ಸಂಬಂಧಪಟ್ಟ ಹಾಗೆ, ಭಾರತೀಯ ವಾಯುಪಡೆಯ(ಐಎಎಫ್) 3ನೇ ಸಾಲಿನ ಪೈಲಟ್ಗಳು ಮತ್ತು ನಿರ್ವಹಣಾ ಸಿಬ್ಬಂದಿಗಳು ಫ್ರಾನ್ಸ್ನಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಸರ್ಕಾರದಿಂದ-ಸರ್ಕಾರಕ್ಕೆ ಮಾಡಿಕೊಂಡ ಒಪ್ಪಂದದಡಿ ಫ್ರಾನ್ಸ್ನಿಂದ ₹59,000 ಕೋಟಿ ಮೊತ್ತದ 36 ರಫೇಲ್ ಯುದ್ಧ ವಿಮಾನಗಳನ್ನು(ಎರಡು ಸ್ಕ್ವಾಡ್ರನ್ಗಳಿಗೆ ಸಮಾನ) ಭಾರತ ಸರ್ಕಾರ 2016 ಸೆಪ್ಟೆಂಬರ್ನಲ್ಲಿ ಖರೀಧಿಸಲು ಆದೇಶಿಸಿತ್ತು.