ಪ.ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರಗಳ ಬಗ್ಗೆ ಟ್ವೀಟ್ ಮಾಡಿದ ಕಂಗನಾ ಖಾತೆ ಸ್ಥಗಿತಗೊಳಿಸಿದ ಟ್ವಿಟ್ಟರ್ | ಜನತಾ ನ್ಯೂಸ್

04 May 2021
443
Tweets on WB gerontocides : Twitter suspended Kangana account

ಮನಾಲಿ : ಕಳೆದೆರಡು ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರಗಳ ಕುರಿತು ಸಂದೇಶ ರವಾನಿಸಿದರು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರ ಟ್ವಿಟರ್ ಅಕೌಂಟ್ ಅನ್ನು ಟ್ವಿಟರ್ ಯಾವುದೇ ಸೂಕ್ತ ಕಾರಣ ನೀಡದೇ ಸ್ಥಗಿತಗೊಳಿಸಿದೆ.

ಖಾತೆ ನಿಷ್ಕ್ರಿಯಗೊಳಿಸುವ ಕೆಲ ನಿಮಿಷದ ಹಿಂದಷ್ಟೇ ಕಂಗನಾ ಅವರು ತುಂಬಾ ಭಾವುಕರಾಗಿ ಮಾತನಾಡಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನೆಲೆ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕವಾಗಿ ಹತ್ಯೆ ಅತ್ಯಾಚಾರ ನಡೆಯುತ್ತಿರುವ ಬಗ್ಗೆ ಮಾತನಾಡಿದ್ದು, ತಾನು ಹಿಂಸಾಚಾರದಿಂದ ಸಾಕಷ್ಟು ನೊಂದಿರುವುದಾಗಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕವಾಗಿ ಜನರ ಹತ್ಯೆ ನಡೆಯುತ್ತಿದೆ, ಅತ್ಯಾಚಾರ ನಡೆಯುತ್ತಿದೆ, ಮನೆಗಳನ್ನು ಸುಡಲಾಗುತ್ತಿದೆ ಈ ಬಗ್ಗೆ ಹೆಸರಾಂತ ಮಿಡಿಯಾಗಳು ಮಾತನಾಡುತ್ತಿಲ್ಲ. ಹೊರಗಿನಿಂದ ಹಿಂದೂಗಳ ವಿರುದ್ಧ ಏನೋ ಷಡ್ಯಂತ್ರ ಮಾಡಲಾಗುತ್ತಿದೆ, ಎಂದು ಆರೋಪಿಸಿದ್ದರು.

ಹಾಗೂ ಹಿಂಸಾಚಾರವನ್ನು ವಿರೋಧಿಸಿ ಬಿಜೆಪಿ ನಡೆಸಲು ಮುಂದಾಗಿರುವ ಧರಣಿ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಕಂಗನಾ ಅವರು, ದೇಶದ್ರೋಹಿಗಳಿಗೆ ನೀವು ಏಕೆ ಹೆದರುತ್ತಾ ಇದ್ದೀರಾ? ದೇಶದ್ರೋಹಿಗಳೇ ದೇಶ ನಡೆಸಲಿದ್ದಾರೆಯೇ? ನನಗೆ ಗೊತ್ತು ಅವರು ತುಂಬಾ ಸದ್ದು ಮಾಡುತ್ತಾರೆ, ಅಂತಾರಾಷ್ಟ್ರೀಯ ಒತ್ತಡವಿದೆ ಎಂದು ನನಗೆ ಗೊತ್ತು. ಆದರೆ ಈಗ ಈ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಗತ್ಯವಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ಜವಾಹರಲಾಲ್ ನೆಹರು 8-12, ಇಂದಿರಾಗಾಂಧಿಯವರು 50 ಭಾರಿ ಮಾಡಿದ್ದರು, ಮನಮೋಹನ್ ಸಿಂಗ್ ಅವರು 10-12 ಭಾರಿ ಮಾಡಿದ್ದರು. ಹಾಗಿದ್ದರೆ, ನಾವ್ಯಾರಿಗೆ ಹೇದುರುತ್ತಿದ್ದೇವೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಲ್ಲದೇ, ಈ ದೇಶವನ್ನು ದೇಶದ್ರೋಹಿಗಳು ನಡೆಸಲಿದ್ದಾರೆಯೇ? ಅಮಾಯಕರ ಹತ್ಯೆ ನಡೆಯುತ್ತಿದ್ದರೆ, ನಾವು ಕೇವಲ ಧರಣಿ ನಡೆಸಲಿದ್ದೆವೆಯೇ? ನಾನು ನಮ್ಮ ಸರ್ಕಾರವನ್ನು ಬೇಡಿಕೊಳ್ಳುತ್ತಿದ್ದೇನೆ. ಈ ನರಮೇಧಗಳನ್ನು ಆದಷ್ಟು ಬೇಗ ನಿಲ್ಲಿಸಿ ಮತ್ತು ಅತ್ಯಂತ ಕಠಿಣ ಕ್ರಮವನ್ನು ಜರುಗಿಸಿ, ಎಂದು ಒತ್ತಾಯಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಹಿಂಬಾಲಕರನ್ನು ಹೊಂದಿರುವ ಬಾಲಿವುಡ್‌ ಕ್ವೀನ್ ಕಂಗನಾ ರಣಾವತ್ ಅವರ ಖಾತೆಗಳನ್ನು ವಿಶೇಷವಾಗಿ ಟ್ವಿಟ್ಟರ್, ಪದೇಪದೇ ಅನೇಕ ಬಾರಿ ಸ್ಥಗಿತಗೊಳಿಸುತ್ತಲೇ ಬಂದಿದೆ. ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಪ್ರಕಟಗೊಂಡು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಮುಂದಾಗಿದೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕಂಗನಾ ರಣಾವತ್ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಟ್ವೀಟ್ ಮಾಡಿದ್ದರು.

RELATED TOPICS:
English summary :Tweets on WB gerontocides : Twitter suspended Kangana account

ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ! | ಜನತಾ ನ್ಯೂ&#
ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ! | ಜನತಾ ನ್ಯೂ&#
ಲಾರಿ-ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ: ಹೆದ್ದಾರಿ ಶುಚಿಗೊಳಿಸುತ್ತಿದ್ದ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ | ಜನತಾ ನ್ಯೂ&#
ಲಾರಿ-ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ: ಹೆದ್ದಾರಿ ಶುಚಿಗೊಳಿಸುತ್ತಿದ್ದ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ ಕರೊನಾಗೆ ಬಲಿ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ ಕರೊನಾಗೆ ಬಲಿ | ಜನತಾ ನ್ಯೂ&#
ರೆಮ್​ಡೆಸಿವಿರ್​ ನಕಲಿ ದಂಧೆಯಲ್ಲಿ ವೈದ್ಯರೇ ಕಿಂಗ್​ಪಿನ್: ಖಾಲಿ ಇಂಜಕ್ಷನ್ ನಲ್ಲಿ ಗ್ಲೂಕೋಸ್ ನೀರು ತುಂಬಿಸಿ ಮಾರಾಟ | ಜನತಾ ನ್ಯೂ&#
ರೆಮ್​ಡೆಸಿವಿರ್​ ನಕಲಿ ದಂಧೆಯಲ್ಲಿ ವೈದ್ಯರೇ ಕಿಂಗ್​ಪಿನ್: ಖಾಲಿ ಇಂಜಕ್ಷನ್ ನಲ್ಲಿ ಗ್ಲೂಕೋಸ್ ನೀರು ತುಂಬಿಸಿ ಮಾರಾಟ | ಜನತಾ ನ್ಯೂ&#
ಬ್ಲಾಕ್​​ ಮಾರ್ಕೆಟ್​​ನಲ್ಲಿ ಆಕ್ಸಿಜನ್ ಸಿಲಿಂಡರ್ ಮಾರುತಿದ್ದ ಮೂವರ ಬಂಧನ | ಜನತಾ ನ್
ಬ್ಲಾಕ್​​ ಮಾರ್ಕೆಟ್​​ನಲ್ಲಿ ಆಕ್ಸಿಜನ್ ಸಿಲಿಂಡರ್ ಮಾರುತಿದ್ದ ಮೂವರ ಬಂಧನ | ಜನತಾ ನ್
ತನ್ನದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ? | ಜನತಾ ನ್ಯೂ&#
ತನ್ನದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ? | ಜನತಾ ನ್ಯೂ&#
ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತುಗಳಿವು! | ಜನತಾ ನ್ಯೂ&#
ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತುಗಳಿವು! | ಜನತಾ ನ್ಯೂ&#
ಕೋವಿಡ್​​​​​​ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್​​​ ನಿರ್ಧಾರ: ಸಿದ್ದರಾಮಯ್ಯ ಘೋಷಣೆ | ಜನತಾ ನ್ಯೂ&#
ಕೋವಿಡ್​​​​​​ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್​​​ ನಿರ್ಧಾರ: ಸಿದ್ದರಾಮಯ್ಯ ಘೋಷಣೆ | ಜನತಾ ನ್ಯೂ&#
ಸದಾನಂದಗೌಡರವರೆ ನೇಣು ಹಾಕಿಕೊಳ್ಳುವುದು ಮಹಾಪಾಪ ಮಾತ್ರವಲ್ಲ ಕಾನೂನಿಗೆ ವಿರುದ್ಧವಾದುದು: ಸಿದ್ದರಾಮಯ್ಯ | ಜನತಾ ನ್ಯೂ&#
ಸದಾನಂದಗೌಡರವರೆ ನೇಣು ಹಾಕಿಕೊಳ್ಳುವುದು ಮಹಾಪಾಪ ಮಾತ್ರವಲ್ಲ ಕಾನೂನಿಗೆ ವಿರುದ್ಧವಾದುದು: ಸಿದ್ದರಾಮಯ್ಯ | ಜನತಾ ನ್ಯೂ&#
ಸಿ.ಟಿ ರವಿ ಅವರೇ ಜನರ ಸಂಕಟಕ್ಕೆ ದನಿಯಾಗಲು ಸರ್ವಜ್ಞನಾಗಬೇಕಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ಸಿ.ಟಿ ರವಿ ಅವರೇ ಜನರ ಸಂಕಟಕ್ಕೆ ದನಿಯಾಗಲು ಸರ್ವಜ್ಞನಾಗಬೇಕಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ಲಾಕ್ ಡೌನ್ ಮುಂದುವರೆಸಿದ್ರೆ ಅನುಕೂಲ ಆಗುತ್ತೆ: ಅಶೋಕ್ | ಜನತಾ ನ್
ಲಾಕ್ ಡೌನ್ ಮುಂದುವರೆಸಿದ್ರೆ ಅನುಕೂಲ ಆಗುತ್ತೆ: ಅಶೋಕ್ | ಜನತಾ ನ್
ಗೃಹಸಚಿವ ಬಸವರಾಜ ಬೊಮ್ಮಾಯಿ ಮನೆ ಮುಂದೆಯೇ ನಿರ್ಮಾಣವಾಯ್ತು ಕೊರೊನಾ ಸೆಂಟರ್! | ಜನತಾ ನ್ಯೂ&#
ಗೃಹಸಚಿವ ಬಸವರಾಜ ಬೊಮ್ಮಾಯಿ ಮನೆ ಮುಂದೆಯೇ ನಿರ್ಮಾಣವಾಯ್ತು ಕೊರೊನಾ ಸೆಂಟರ್! | ಜನತಾ ನ್ಯೂ&#

ನ್ಯೂಸ್ MORE NEWS...