ಹಾಲಿನ ವಾಹನ ಪಲ್ಟಿ; 1 ಸಾವಿರ ಲೀಟರ್ ಹಾಲು ರಸ್ತೆ ಪಾಲು | ಜನತಾ ನ್ಯೂಸ್
ಧಾರವಾಡ : ಬೀದಿನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸುಮಾರು 1 ಸಾವಿರ ಲೀಟರ್ ಹಾಲು ರಸ್ತೆ ಪಾಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಹಳಿಯಾಳದಿಂದ ಧಾರವಾಡಕ್ಕೆ ಬಂದಿದ್ದ ಹಾಲಿನ ವಾಹನ ಇದಾಗಿದ್ದು, ಜೆ.ಎಸ್.ಎಸ್. ಕಾಲೇಜಿನ ಎದುರು ಬೀದಿ ನಾಯಿ ಅಡ್ಡ ಬಂದಿದ್ದನ್ನು ತಪ್ಪಿಸಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಸದ್ಯ ಈ ಸಂಬಂಧ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಗೆ ಬಂದ ಬೀದಿನಾಯಿಗೆ ಹಾಲಿನ ವಾಹನ ಡಿಕ್ಕಿಯಾಗುವುದನ್ನ ತಪ್ಪಿಸಲು ಯತ್ನಿಸಿದ ಚಾಲಕ ಬಿಆರ್ಟಿಎಸ್ ಕಾರಿಡಾರ್ನ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ರಸ್ತೆ ಮಧ್ಯೆ ವಾಹನ ಪಲ್ಟಿಯಾಗಿದ್ದು, ಹಾಲೆಲ್ಲ ರಸ್ತೆಪಾಲಾಗಿದೆ.
RELATED TOPICS:
English summary :Dharwad