ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ "ಚರ್ಮದ ಬ್ಲ್ಯಾಕ್ ಫಂಗಸ್" ಕೇಸ್ ಪತ್ತೆ : ಏಲ್ಲಿ? | ಜನತಾ ನ್ಯೂಸ್
ಚಿತ್ರದುರ್ಗ : ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿಯನ್ನ ಚಿತ್ರದುರ್ಗದ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ತಜ್ಞ ಇಎನ್.ಟಿ ವೈದ್ಯ ಡಾ.ಎನ್.ಬಿ.ಪ್ರಹ್ಲಾದ್ ಮಾಹಿತಿ ನೀಡಿದ್ದು, ನಗರದಲ್ಲಿನ ಕೊರೋನಾ ಸೋಂಕಿನಿಂದ ಗುಣಮುಖವಾಗುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ದೇಶದಲ್ಲೇ ಮೊದಲು ಎನ್ನುವಂತೆ ಚರ್ಮದ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿರೋದಾಗಿ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ 50 ವರ್ಷದ ರೋಗಿಯಲ್ಲಿ ಸ್ಕಿನ್ ಮ್ಯೂಕರ್ ಮೈಕೋಸಿಸ್ ಪತ್ತೆಯಾಗಿದೆ. ಮಧುಮೇಹದಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ಬಲ ಭಾಗದ ಕಿವಿ ಸಮೀಪ ಚರ್ಮದ ಕಪ್ಪು ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ.
ಚಿತ್ರದುರ್ಗ ನಗರದ ಕರ್ನಾಟಕ ಕಿವಿ, ಮೂಗು ಗಂಟಲು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಇಎನ್ಟಿ ತಜ್ಞ ಡಾ.ಎನ್.ಬಿ. ಪ್ರಹ್ಲಾದ್ ಅವರು ರೋಗಿಗೆ ಶಸ್ತ್ರ ಚಿಕಿತ್ಸೆ ಮೂಲಕ ಬ್ಲ್ಯಾಕ್ ಫಂಗಸ್ ಆಗಿದ್ದ ಭಾಗವನ್ನ ತೆರವು ಮಾಡಿದ್ದಾರೆ.