ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! | ಜನತಾ ನ್ಯೂಸ್
ಚಿಕ್ಕಬಳ್ಳಾಪುರ : ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲಾ ಶಿಕ್ಷಕ ಕೊಲೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.
ಗೌರಿಬಿದನೂರು ನಗರ ಹೊರವಲಯದ ನರ್ಸಿಂಗ್ ಕಾಲೇಜು ಎದುರು ಕೊಲೆಯಾಗಿದ್ದ ಸರ್ಕಾರಿ ಶಾಲೆ ಶಿಕ್ಷಕನ ಪ್ರಕರಣ ಸಂಬಂಧ ನಾಲ್ವರು ಸಂಲಿಗಕಾಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
42 ವರ್ಷದ ವಿಶ್ವನಾಥ್ ಕೊಲೆಯಾದ ಶಿಕ್ಷಕ. ಆಕಾಶ್, ಮನು, ಮಂಜುನಾಥ್ ಹಾಗೂ ಶ್ರೀಕಾಂತ್ ಆರೋಪಿಗಳು. ಈ ನಾಲ್ವರಲ್ಲಿ ಎ1 ಆರೋಪಿ ಆಕಾಶ್ ಬಿಟ್ಟು ಉಳಿದ ಮೂವರನ್ನ ಗೌರಿಬಿದನೂರು ನಗರ ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ಜು.4ರ ರಾತ್ರಿ ಗೌರಿಬಿದನೂರು ನಗರದ ಸದಾಶಿವ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಒಳಗಡೆ ನಿಲ್ಲಿಸುವುದಾಗಿ ಹೊರ ಹೋಗಿದ್ದ ಭೂಮನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ವಿಶ್ವನಾಥ್(42) ಅಂದು ಕಾಣೆಯಾಗಿದ್ದರು.
ಹುಡುಕಿಕೊಂಡ ಹೊರಟ ಕುಟುಂಬಸ್ಥರಿಗೆ ಬೆತ್ತಲೆ ಸ್ಥಿತಿಯಲ್ಲಿ ಬರ್ಬರ ಹತ್ಯೆವಾಗಿ ಹತ್ಯೆಯಾಗಿದ್ದ ವಿಶ್ವನಾಥ್ ಮೃತದೇಹ ನರ್ಸಿಂಗ್ ಕಾಲೇಜು ಎದುರಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಶಿಕ್ಷಕನನ್ನು ಸಲಿಂಗಕಾಮಕ್ಕೆ ಕರೆದಿದ್ದು, ಇದಕ್ಕೆ ಅವರು ಒಪ್ಪಿಲ್ಲ ಈ ಹಿನ್ನೆಲೆ ಕಿಡಿಗೇಡಿಗಳು ಶಿಕ್ಷಕನನ್ನು ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು