ಮದುವೆ ಸಿದ್ಧತೆಯಲ್ಲಿದ್ದ ಮನೆಗೆ ಅಧಿಕಾರಿಗಳ ದಾಳಿ; ಬಾಲ್ಯ ವಿವಾಹಕ್ಕೆ ತಡೆ | ಜನತಾ ನ್ಯೂಸ್
ಮಂಗಳೂರು : ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯ ದುಗ್ಗಲಡ್ಕ ಕಂದಡ್ಕಕ್ಕೆ ರಾತ್ರಿ ಸಿ.ಡಿ.ಪಿ.ಒ. ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬಾಲ್ಯ ವಿವಾಹವೊಂದನ್ನು ತಡೆದ ಘಟನೆ ವರದಿಯಾಗಿದೆ.
ಕಂದಡ್ಕದ ತಮಿಳು ಕುಟುಂಬವೊಂದರ ಪ್ರತಾಪ ಎಂಬ 26 ವರ್ಷದ ಯುವಕನಿಗೆ ಜು.15 ರಂದು ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದಿತ್ತು ಎನ್ನಲಾಗಿದೆ.
ಹುಡುಗಿಗೆ 18 ವರ್ಷ ಆಗಿಲ್ಲ ಎಂಬ ಮಾಹಿತಿ ಬಂದ ಕೂಡಲೇ ಸಿ.ಡಿ.ಪಿ.ಒ. ರಶ್ಮಿ ಅಶೋಕ್‌ರವರು ಇಲಾಖೆಯ ಮೇಲ್ವಿಚಾರಕಿ ಹಾಗೂ ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್, ನಾಲ್ಕು ಮಂದಿ ಪೋಲೀಸರ ಜತೆಗೆ ಕಂದಡ್ಕ ತಮಿಳು ಕಾಲನಿಗೆ ಹೋದರು ಎನ್ನಲಾಗಿದೆ.
ಅಧಿಕಾರಿಗಳ ತಂಡ ದಾಳಿ ನಡೆಸಿ ಪೂರಕ ಮಾಹಿತಿ ಕೇಳಿದೆ. ಈ ಸಂದರ್ಭ ಹುಡುಗಿಯ ಕುಟುಂಬ ದಾಖಲೆ ನೀಡಲು ತಡವರಿಸಿ 18 ವರ್ಷವಾಗಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.