Mon,May06,2024
ಕನ್ನಡ / English

ವಿವಾಹಕ್ಕೂ ಮುನ್ನ ಅತ್ಯಾಚಾರ, ಕಿರುತೆರೆ ನಟಿ ದೂರು | ಜನತಾ ನ್ಯೂಸ್

10 Nov 2021
4139

ಬೆಂಗಳೂರು : ವಿವಾಹಕ್ಕೂ ಮುನ್ನ ಅತ್ಯಾಚಾರ ಮಾಡಿ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮದುವೆ ಆಗ್ತೀನಿ ಎಂದು ಪದೇಪದೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ನಾನು ಒತ್ತಾಯ ಮಾಡಿದ್ದಕ್ಕೆ ಕೊನೆಗೂ ನನ್ನ ಕುತ್ತಿಗೆಗೆ ತಾಳಿ ಕಟ್ಟಿದ. ಇದೀಗ ನನ್ನನ್ನು ಮದುಯೇ ಆಗಿಲ್ಲ ಎನ್ನುತ್ತಿದ್ದಾನೆ.

ಅಷ್ಟೇ ಅಲ್ಲ "ನೀನು ವೇಷ್ಯೆ" ಎಂದು ಬೈಯುತ್ತಾ ಚಿತ್ರಹಿಂಸೆ ಕೊಡುತ್ತಿದ್ದಾನೆ. ಕೋಟಿಗಟ್ಟಲೇ ವರದಕ್ಷಿಣೆ ಹಣ ಕೊಡು ಎಂದು ಪ್ರತಿನಿತ್ಯ ಹಿಂಸೆ ಕೊಡುತ್ತಿದ್ದಾನೆ. ಈ ಹಿಂಸೆಯನ್ನ ನನ್ನಿಂದ ಸಹಿಸೋಕೆ ಆಗ್ತಿಲ್ಲ… ಗಂಡನ ಕುಟುಂಬಸ್ಥರು ಜೀವ ಬೆದರಿಕೆ ಹಾಕಿದ್ದಾರೆ… ಆರೋಪಗಳನ್ನು ನಟಿ ಮಾಡಿದ್ದಾರೆ.

ದೂರು:
ಮದುವೆಗೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಯುವಕ ಪರಿಚಯವಾಗಿದ್ದ. ಈ ಪರಿಚಯದಿಂದ ನಮ್ಮಿಬ್ಬರಲ್ಲಿ ಸಲುಗೆಗೆ ಬೆಳೆದಿತ್ತು.‌ ಬಳಿಕ ಗ್ರಾಮೀಣ‌ ಪ್ರತಿಭೆ ಬೆಳೆಯಬೇಕು ಎನ್ನುತ್ತಾ ಆತ ಹತ್ತಿರವಾಗಿದ್ದ. ಒಂದು ದಿನ ಏಕಾಏಕಿ ಭೇಟಿ ಮಾಡೋಣ ಎಂದು ಕರೆದಿದ್ದಾನೆ.

ಕೊರೊನಾ ಹಿನ್ನೆಲೆಯಲ್ಲಿ ಹೇಗೆ ಭೇಟಿ ಮಾಡುವುದು? ಹೊರಗೆ ಹೋಗುವುದು ಕಷ್ಟ ಎಂದು ಹೇಳಿದೆ. ಹಾಗಾದರೆ ನಿಮ್ಮ ಮನೆಯಲ್ಲಿ ಭೇಟಿಯಾಗೋಣ ಎಂದಿದ್ದ.‌ ಇದರಂತೆ ವಿವಾಹಕ್ಕೂ ಮುನ್ನ ಮನೆಗೆ ಬಂದು ಏಕಾಏಕಿ ನನ್ನನ್ನು ಬಲವಂತವಾಗಿ ಬಾಯಿ ಮುಚ್ಚಿ ಅತ್ಯಾಚಾರ ಮಾಡಿದ್ದಾನೆ.

ಈ ವೇಳೆ ನಾನು ಅಳುತ್ತಾ ಕುಳಿತಾಗ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದಾದ ಬಳಿಕ ಹಲವು ಬಾರಿ ಮನೆಗೆ ಬಂದಾಗ ಅತ್ಯಾಚಾರ ಮಾಡಿದ್ದಾನೆ. ಇದೆಲ್ಲಾ‌ ಮದುವೆಯ ಬಳಿಕ ಇಟ್ಟುಕೊಳ್ಳುವ‌, ಈಗ ಬೇಡವೆಂದರೂ ಈಗಾಗಲೇ ನಮಗೆ ಮದುವೆ ಆಗಿದೆ ಅಂದುಕೊಂಡಿದ್ದೇನೆ ಎಂದು ಆತ ನಂಬಿಸಿದ್ದ.

ಹಲವು ಬಾರಿ ಮನೆಗೆ ಬಂದಾಗಲೆಲ್ಲ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇಷ್ಟೆಲ್ಲ ಮುಗಿದ ಮೇಲೆ ಮದುವೆ ಆಗೋಣ ಅಂದೆ. ಅದಕ್ಕೆ ಆತ, ಈಗಾಗಲೇ ನಮಗೆ ಮದುವೆ ಆಗಿದೆ ಅಂದುಕೊಂಡಿದ್ದೇನೆ ಎಂದು ನಂಬಿಸಿದ್ದ. ಇದೇ ರೀತಿ ಹೇಳುತ್ತಾ ನನ್ನೊಂದಿಗೆ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ವೇಳೆ ನನ್ನ ‌ಆರೋಗ್ಯದಲ್ಲಿ ಏರುಪೇರಾಯ್ತು. ಆಗ ನನ್ನ‌ ಫ್ಯಾಮಿಲಿ ವೈದ್ಯರನ್ನು ‌ಸಂಪರ್ಕಿಸಿ ಚಿಕಿತ್ಸೆ ಪಡೆದಿದ್ದೆ.

ಹೀಗೆ ಕೆಲವು ತಿಂಗಳ ಬಳಿಕ ಮದುವೆಯಾಗುವ ವಿಚಾರ ಮಾತನಾಡಿದ್ದೆ. ಮದುವೆ ಆಗೋಣ ಎನ್ನುತ್ತಿದ್ದವನು ನಿಧಾನವಾಗಿ ನನ್ನನ್ನು ದೂರಮಾಡಲಾರಂಭಿಸಿದ. ಸೋಷಿಯಲ್ ಮೀಡಿಯಾ, ಮೊಬೈಲ್‌ನಲ್ಲಿ ಹೀಗೆ ಎಲ್ಲಾ ಕಡೆ ಬ್ಲಾಕ್ ಮಾಡಿದ್ದಾನೆ.‌ ಇದೇ ವಿಚಾರವಾಗಿ ನಾನು ಗಲಾಟೆ ಮಾಡಿ ಯಾಕೆ ಮೋಸ ಮಾಡುತ್ತಿದ್ದೀಯಾ? ಎಂದು ಕೇಳಿದೆ. ಇದೇ ವಿಚಾರವಾಗಿ ಚಂದ್ರಾಲೇಔಟ್ ಬಳಿ ದೇವಸ್ಥಾನದಲ್ಲಿ ಗೆಳೆಯರ ಜತೆ ಮಾತುಕತೆ ಆಯ್ತು. ಆಗ ಸ್ಥಳದಲ್ಲೇ ಮದುವೆ ಮಾಡಿಕೋ ಎಂದು ನನ್ನ ಕುತ್ತಿಗೆಗೆ ಆತ ತಾಳಿ ಕಟ್ಟಿದ.

ಇದಾದ ಬಳಿಕ ಮನೆಗೆ ಹೋದಾಗ ಮನೆಯವರ ಮುಂದೆ ನಾನು ಮದುವೆ ಆಗಿಲ್ಲ ಎಂದಿದ್ದಾನೆ. ಇದೇ ವಿಚಾರವಾಗಿ ಗಲಾಟೆಗಳು ನಡೆದವು. ನಾನು ಕೋಲಾರ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದೆ.

ಅವರ ಮನೆಗೆ ಹೋದ ಮೊದಲ ದಿನವೇ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದ್ದರು. ನನ್ನ ಜಾತಿಯನ್ನು ನಿಂದಿಸಿ, ವಾಪಸ್ ಹೋಗುವಂತೆ ಅವಮಾನ ಮಾಡಿ ಕೋಟಿ ಕೋಟಿ ರೂ ವರದಕ್ಷಿಣೆ ತರುವಂತೆ ಹೇಳಿದ್ದರು

"ನೀನು ವೇಷ್ಯೆ" ಎಂದು ನನಗೆ ಬೈದು ನನ್ನ ಗೌರವಕ್ಕೆ ಧಕ್ಕೆ ತಂದರು. ನನ್ನ ಗಂಡನ ತಂದೆ "ನಿನ್ನನ್ನು ಹತ್ಯೆ ಮಾಡಿ ರೈಲ್ವೆ ಟ್ರ್ಯಾಕ್‌ ಮೇಲೆ ಹಾಕುತ್ತೇನೆ" ಎಂದು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿ ಎಂದು ಕಿರುತೆರೆ ನಟಿ ದೂರಿನಲ್ಲಿ ಮನವಿ ಮಾಡಿದ್ದಾರೆ.

RELATED TOPICS:
English summary :Bangalore

ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
 ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ  ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ

ನ್ಯೂಸ್ MORE NEWS...