Sat,Apr27,2024
ಕನ್ನಡ / English

ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ | ಜನತಾ ನ್ಯೂಸ್

08 Dec 2021
2539

ಮೈಸೂರು : ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಮೀಸಲಾತಿ ಇರಲಿಲ್ಲ. ಮೊದಲ ಬಾರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ನೀಡಲಾಯಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮುಸ್ಲಿಮ್, ಕ್ರಿಶ್ಚಿಯನ್ನರನ್ನು ಟಾರ್ಗೆಟ್ ಮಾಡಲೆಂದೇ ರಾಜ್ಯದ ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾಶವಿದೆ. ಆದರೆ ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ, ಆದರೆ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಲ್ಲದೆ ಜನಸಾಮಾನ್ಯರ ಸ್ವತಂತ್ರವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕಾಗಿ ಇರುವ ಪಕ್ಷವಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಆದರೆ ಬೇರೆ ಯಾವ ಪಕ್ಷವು ಸಾಮಾಜಿಕ ನ್ಯಾಯಕ್ಕಾಗಿ ಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಪಕ್ಷದಲ್ಲಿ ವಯಸ್ಸಾದವರಿಗೆ, ಯುವಕರಿಗೆ ಸೇರಿದಂತೆ ಎಲ್ಲರಿಗೂ ಸ್ಪರ್ಧೆಗೆ ಅವಕಾಶ ನೀಡಿದ್ದೇವೆ. ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳು ಮೀಸಲಾತಿ ವಿರೋಧಿ ಪಕ್ಷಗಳಾಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ಏನು ಕೊಡುಗೆ ನೀಡಿಲ್ಲ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜೀವ್ ಗಾಂಧಿ ಪ್ರಧಾನಮಂತ್ರಿ ಆಗುವವರಗೆ ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ. ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಮೀಸಲಾತಿ ಇರಲಿಲ್ಲ. ಮೊದಲ ಬಾರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ನೀಡಲಾಯಿತು.

ಹಿಂದೂತ್ವದಲ್ಲಿ ಸಮಾನತೆ ಇಲ್ಲ ಎಂದೇ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಹಾಗಾಗಿ ಅವರವರಿಗೆ ಯಾವ ಧರ್ಮದಲ್ಲಿ ನಂಬಿಕೆ ಇದಿಯೊ ಆ ಧರ್ಮವನ್ನು ಅನುಸರಿಸುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು.

ಮೇಕೆದಾಟು ಯೋಜನೆ ಜಾರಿ ಮಾಡಬೇಕೆಂದು ಮೇಕೆದಾಟುವಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವುದು ಡಿ.ಕೆ.ಶಿವಕುಮಾರ್ ಅಲ್ಲ, ಇದು ಪಕ್ಷದ ತೀರ್ಮಾನ‌. ಹಾಗಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರುಗಳು ಭಾಗವಹಿಸುತ್ತೇವೆ. ಬಿಜೆಪಿಯವರಿಗೆ ಏಕೆ ಅನುಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED TOPICS:
English summary :Siddaramaiah

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ, ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ
ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನ್ಯೂಸ್ MORE NEWS...