ಲೈಸನ್ಸ್ ಇಲ್ಲದ ಗನ್ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್ | ಜನತಾ ನ್ಯೂಸ್
ಬೆಂಗಳೂರು : ಬೆಂಗಳೂರಿಗೆ ಗನ್ ಮಾಫಿಯಾ ಕಾಲಿಟ್ಟಿದ್ದು, ಯಾವುದೇ ಪರವಾನಗೆ ಇಲ್ಲದೆ ಗನ್ ಸಪ್ಲೈ ಮಾಡಲಾಗುತ್ತಿದೆ..
ಹೊರರಾಜ್ಯಗಳಿಂದ ನಗರಕ್ಕೆ ಗನ್ ಸಪ್ಲೈ ಮಾಡಲಾಗ್ತಿದ್ದು, ನಗರದ ಹಲವು ಕಡೆ ಅಕ್ರಮವಾಗಿ ಗನ್ ಮಾರಾಟದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಿಂದ ಲೈಸೆಲ್ಸ್ ಇಲ್ಲದ ಗನ್ಗಳನ್ನು ತೆಗೆದುಕೊಂಡು ಬಂದು ಬೆಂಗಳೂರಲ್ಲಿ ಮಾರಾಟ ಮಾಡಲಾಗ್ತಿದೆ.
ಆರೋಪಿಗಳು ಸ್ಯಾಟಲೈಟ್ ಬಸ್ ಸ್ಟಾಪ್ ಬಳಿ ಅಕ್ರಮವಾಗಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿದ್ದು ಬ್ಲಾಕ್ ಬ್ಯಾಗ್ನ ಒಳಗೆ ವೈಟ್ ಬ್ಯಾಗ್ನಲ್ಲಿ ಪಿಸ್ತೂಲ್ಇಟ್ಟುಕೊಂಡಿದ್ದರು. ಸದ್ಯ ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರ ಮೂಲದವರಾದ ರಾಹುಲ್ ಸತೀಶ್ ಮಾನೆ ಮತ್ತು ರಫಿಕ್ ದಸ್ತಗಿರ್ ನದಾಫ್ ಬಂಧಿತ ಆರೋಪಿಗಳು. ಬಂಧಿತರಿಂದ ಪಿಸ್ತೂಲ್ ಜೊತೆ ಐದು ಜೀವಂತ ಗುಂಡುಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಬ್ಬರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯವರಾಗಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.