ಬಳ್ಳಾರಿಯಲ್ಲಿ ಹೊಟೇಲ್‍ನಲ್ಲಿ ಇಡ್ಲಿ ತಿಂದು 15 ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು | JANATA NEWS
ಬಳ್ಳಾರಿ : ಹೊಟೆಲ್ ನಲ್ಲಿ ಇಡ್ಲಿ ತಿಂದ 15 ಜನ ಅಸ್ವಸ್ಥರಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊಟೆಲ್ ನಲ್ಲಿ ಇಡ್ಲಿ ತಿಂದು ಅಸ್ವಸ್ಥತಗೊಂಡು 15 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಚಿಕಿತ್ಸೆ ಪಡೆದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲರನ್ನೂ ಸಿರಗುಪ್ಪ ತಾಲೂಕು ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.
English summary :15 persons hospitalized for eating idly at a hotel in Bellary