ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಬಿಎಂಪಿ BMTF ಅಧಿಕಾರಿ ಬೇಬಿ ವಾಲೇಕರ್ | JANATA NEWS
ಬೆಂಗಳೂರು : ಬಿಬಿಎಂಪಿಯ ಬಿಎಂಟಿಎಫ್ ಅಧಿಕಾರಿ ಮೇಲೆ ಎಸಿಬಿ ದಾಳಿ ನಡೆಸಿದೆ. ಮಾಜಿ ಕಾರ್ಪೋರೇಟರ್ ಬಳಿ ಲಂಚ ಪಡೆಯಲು ಮುಂದಾಗಿದ್ದ ಬಿಎಂಟಿಎಫ್ ಅಧಿಕಾರಿ ಬೇಬಿ ವಾಲೇಕರ್ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ ಪಿಎಸ್ಐ ಬೇಬಿ ಓಲೇಕರ್ ಗಿರೀಶ್ ಎಂಬುವರ ಬಳಿ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹೊರಮಾವು ಅಗರ ಸರ್ವೆ ನಂಬರ್ 153ರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸಲು 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಸಬ್ ಇನ್ಸ್ ಪೆಕ್ಟ್ರ್ ಬೇಬಿ ವಾಲೇಕರ್. ಈ ಸಂಬಂಧ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ ದೂರು ನೀಡಿದ್ದರು, ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇನ್ನು, ಗಿರೀಶ್ ಎಂಬುವರಿಂದ ಲಂಚ ಪಡೆಯುತ್ತಿರುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೂಡಲೇ ಪಿಎಸ್ಐ ಬೇಬಿ ಓಲೇಕರ್ ಅವರನ್ನು ಅರೆಸ್ಟ್ ಮಾಡಿದ್ದಾರೆ.