Fri,May03,2024
ಕನ್ನಡ / English

ಜಿಲ್ಲಾದ್ಯಂತ ಅಬಕಾರಿ ಇಲಾಖೆಯ ದಾಳಿ | Janata news

19 Apr 2018
1019

ಕಾರವಾರ : ಚುನಾವಣೆ ಬಿಸಿ ಏರುತ್ತಿದ್ದಂತೆ ಜಿಲ್ಲೆಯಲ್ಲಿ ಅಕ್ರಮ ಮದ್ಯಗಳ ಜಾಲ ಹೆಚ್ಚುತ್ತಿದ್ದು, ಅಬಕಾರಿ ಇಲಾಖೆಯು ದಾಳಿಮಾಡಿ ಜಿಲ್ಲಾದ್ಯಂತ ಭರ್ಜರಿ ಮೊತ್ತದ ಮದ್ಯ ವಶಕ್ಕೆ ತೆಗೆದುಕೊಂಡಿದೆ. ಒಂದು ದಿನದ ಒಳಗೆ ಜಿಲ್ಲೆಯಲ್ಲಿ ಸುಮಾರು ಆರು ಕಡೆ ದಾಳಿ ನಡೆದ ಬಗ್ಗೆ ತಿಳಿದುಬಂದಿದೆ.
1. ಅಬಕಾರಿ ನಿರೀಕ್ಷಕರು-1, ರಾಜ್ಯ ವಿಚಕ್ಷಣದಳ, ಬೆಂಗಳೂರು ಇವರು ಹೊನ್ನಾವರ ತಾಲೂಕಿನ ಹೊನ್ನಾವರ ಶಹರದ ಬಜಾರ ರೋಡ್‍ ಕಾಮತ ಹೊಟೇಲ್‍ ಎದುರುಗಡೆಯಲ್ಲಿ ಟಿ.ವಿ.ಎಸ್. ಅಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 8.640 ಲೀಟರ್ ಭಾರತೀಯ ಮದ್ಯ ಮತ್ತು 7.920 ಲೀಟರ್ ಭಾರತೀಯ ಬೀರ್‍ನ್ನು ವಶಪಡಿಸಿಕೊಂಡು 01 ಘೋರ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ. ವಾಹನ ಚಾಲಕನಾದ ಉದಯ ನಾರಾಯಣ ನಾಯ್ಕ, ಸಾ: ತೊಪ್ಪಲಕೇರಿ, ಕರ್ಕಿ, ಹೊನ್ನಾವರ ಇವರನ್ನು ಬಂದಿಸಿರುತ್ತಾರೆ. ಜಪ್ತಿಯಾದ ವಾಹನದ ಅಂದಾಜು ಮೌಲ್ಯರೂ. 2,00,000/- ಮತ್ತು ಮದ್ಯ ಮತ್ತು ಬೀರಿನ ಅಂದಾಜು ಮೌಲ್ಯರೂ. 4,906/- ಆಗಿರುತ್ತದೆ.

2. ಅಬಕಾರಿ ನಿರೀಕ್ಷಕರು, ಜಿಲ್ಲಾತಂಡ, ಕಾರವಾರಇವರು ಸಾಯಂಕಾಲ 5-00 ಗಂಟೆಗೆಕಾರವಾರ ಶಹರದ ಸುಭಾಶ ಸರ್ಕಲ್ ಹತ್ತಿರದ ಸೀಬರ್ಡ್ ಟ್ರಾವೆಲ್ಸ್‍ ಆಫೀಸ್ ಹತ್ತಿರದ ಮುಂಭಾಗದ ಪಾದಾಚಾರಿ ಮಾರ್ಗದಲ್ಲಿ ದಾಸ್ತಾನಿಟ್ಟಒಟ್ಟೂ 12.750 ಲೀಟರ್ ಗೋವಾ ಮದ್ಯ ಮತ್ತು 33.750 ಲೀಟರ್ ಫೆನ್ನಿಯನ್ನು ವಶಪಡಿಸಿಕೊಂಡು 01 ಘೋರ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ. ಆರೋಪಿ ಯಾರೆಂದು ಪತ್ತೆಯಾಗಿರುವುದಿಲ್ಲ. ಜಪ್ತಿಯಾದ ಮದ್ಯದಅಂದಾಜು ಮೌಲ್ಯರೂ. 9,300/- ಆಗಿರುತ್ತದೆ.

3. ಅಬಕಾರಿ ಉಪ ನಿರೀಕ್ಷಕರು-1, ದಾಂಡೇಲಿ ವಲಯ, ದಾಂಡೇಲಿ ಇವರುರಾತ್ರಿ 8-15ಗಂಟೆಗೆ ಜೊಯಿಡಾ ತಾಲೂಕಿನ ರಾಮನಗರ ಗ್ರಾಮದ ಶಿವಾಜಿ ಸರ್ಕಲ್ ಬಳಿ ಇರುವ ಗೂಡಂಗಡಿಯ ಮೇಲೆ ಧಾಳಿ ನಡೆಸಿ, 0.030 ಲೀಟರ್ ಭಾರತೀಯ ಮದ್ಯವನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 30/-)

4. ಅಬಕಾರಿ ಉಪ ನಿರೀಕ್ಷಕರು-2, ಅನಮೋಡ ತನಿಖಾಠಾಣೆ ಇವರು ಸಾಯಂಕಾಲ 7-00 ಗಂಟೆಗೆ ರಹದಾರಿ ಪತ್ರ ಇಲ್ಲದೇ ಸಾಗಿಸುತ್ತಿದ್ದ 2.250 ಲೀಟರ್ ಭಾರತೀಯ ಮದ್ಯವನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 342/-)

5. ಅಬಕಾರಿ ನಿರೀಕ್ಷಕರು, ಹೊನ್ನಾವರ ವಲಯ ಇವರು ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದಲ್ಲಿ ರಾತ್ರಿ 12-05 ಗಂಟೆಗೆ ಧಾಳಿ ನಡೆಸಿ, 1.260 ಲೀಟರ್ ಭಾರತೀಯ ಮದ್ಯವನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 392/-)

6. ಅಬಕಾರಿ ನಿರೀಕ್ಷಕರು, ಕುಮಟಾ ವಲಯ ಇವರು ಕುಮಟಾ ತಾಲೂಕಿನ ಸಾಂತಗಲ್‍ನ ದಿವಳ್ಳಿಯಲ್ಲಿ ಸಾಯಂಕಾಲ 7-00 ಗಂಟೆಗೆ ಧಾಳಿ ನಡೆಸಿ, 0.450 ಲೀಟರ್ ಭಾರತೀಯ ಮದ್ಯ ಮತ್ತು 1.950 ಭಾರತೀಯ ಬೀರ್‍ನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 480/-)

English summary :Excise dept raid in district

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ, ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ನ್ಯೂಸ್ MORE NEWS...