Sat,May04,2024
ಕನ್ನಡ / English

ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ, ಶ್ರೀರಾಮನ ಸಂಕಲ್ಪ ಶಕ್ತಿಯಿಂದ ಹೊಸ ಎತ್ತರಕ್ಕೇರಲಿದೆ ಭಾರತ! | JANATA NEWS

23 Oct 2022
2429

ಅಯೋಧ್ಯೆ : ಸರಯೂ ನದಿ ತಟದಲ್ಲಿ ದೀಪಾವಳಿ ಹಬ್ಬ ಆಚರಣೆ ಹೊಸ ದಾಖಲೆ ಬರೆದಿದೆ. 18 ಲಕ್ಷ ದೀಪ ಬೆಳಗುವು ಮೂಲಕ ದಾಖಲೆ ಬರೆಯಲಾಗಿದೆ.. ಈ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಅಯೋಧ್ಯೆ 5 ದಿನಗಳ ಕಾಲ 18 ಲಕ್ಷ ದೀಪಗಳಿಂದ ಕಂಗೊಳಿಸಲಿದೆ. ಇಡೀ ಆಯೋಧ್ಯೆಯಲ್ಲಿ ದೀಪಾವಳಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ದೀಪೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಲೇಸರ್ ಲೈಟಿಂಗ್ಸ್ ಮೂಲಕ ರಾಮಕಥಾ ಪ್ರಸ್ತುತಪಡಿಸಲಾಯಿತು.

ಅಯೋಧ್ಯೆಯ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲು ಇಂದು ಸಂಜೆ ಉತ್ತರ ಪ್ರದೇಶದ ಅಯೋಧ್ಯೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ದೀಪೋತ್ಸವದಲ್ಲಿ ಪಾಲ್ಗೊಂಡರು.

ಜೈ ಶ್ರೀರಾಮ್ ಎಂದು ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ರಾಮನ ಪವಿತ್ರ ಜನ್ಮಸ್ಥಳದಿಂದ, ನಾನು ನನ್ನ ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ರವಾನಿಸುತ್ತೇನೆ ಎಂದು ಮೋದಿ ಹೇಳಿದರು.

ನಾವು ಲಕ್ಷ ಲಕ್ಷ ದೀಪ ಬೆಳಗಿದ್ದೇವೆ, ಆದರೆ 14 ವರ್ಷಗಳ ವನವಾಸ ಮುಗಿಸಿ ಆಯೋಧ್ಯೆಗೆ ಆಗಮಿಸಿದ ಶ್ರೀರಾಮನಿಗೆ ಯಾವ ರೀತಿ ಸ್ವಾಗತ ಸಿಕ್ಕಿರಬಹುದು ಎಂದು ನಾನು ಯೋಚಿಸುತ್ತಿದ್ದೆ. ನಾವು ರಾಮಯುಗ ನೋಡಿಲ್ಲ. ಆದರೆ ನಾವು ಅದ್ಧೂರಿ ದೀಪಾವಳಿ ಆಚರಿಸುತ್ತಿದ್ದೇವೆ. ಪ್ರಭು ಶ್ರೀ ರಾಮ, ರಾವಣನ ಅಂತ್ಯವನ್ನೂ ಸಾವಿರಾರು ವರ್ಷಗಳ ಹಿಂದೆ ಮಾಡಿದ್ದಾನೆ. ಆದರೆ ಈಗಲೂ ರಾವಣ ಹರ ಮಾಡುತ್ತೇವೆ. ಇಂದು ಬಳಗಿರುವ ಪ್ರತಿಯೊಂದು ದೀಪವೂ ಶ್ರೀರಾಮ ಆದರ್ಶಗಳನ್ನು ಹೇಳುತ್ತಿದೆ. ನಮಗೆ ಈ ದೀಪಾವಳಿ, ದೀಪ ಕೇವಲ ಒಂದು ವಸ್ತುವಲ್ಲ. ವಿಶ್ವವನ್ನೇ ಬೆಳಗುವ ಶಕ್ತಿ ಎಂದು ಮೋದಿ ಹೇಳಿದ್ದಾರೆ.

janata

ಶ್ರೀರಾಮನ ಸಂಕಲ್ಪ ಶಕ್ತಿಯಿಂದ ನಾವು ಪಾಠ ಕಲಿಯಬೇಕಿದೆ. ಭಾರತ ತನ್ನ ಸಾಧನೆಗಳ ಮೂಲಕ ಶೀಘ್ರದಲ್ಲೇ ಅಭಿವೃದ್ದಿಯಲ್ಲಿ ಹೊಸ ಎತ್ತರಕ್ಕೆ ಏರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಶ್ರೀರಾಮ ಎಂದಿಗೂ ಯಾರನ್ನೂ ಹಿಂದಿಕ್ಕಲಿಲ್ಲ. ಎಲ್ಲರ ಜೊತೆ ಒಂದಾಗಿ ನಡೆದು ಆದರ್ಶಪ್ರಾಯರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಜಯವೂ ಯಾವಗಲೂ ಶ್ರೀರಾಮ ರೂಪಿ ಸದಾಚಾರನಿಗೆ ಒಲಿಯುತ್ತದೆ. ಇದು ರಾಣವನ ರೂಪಿಗಲ್ಲ. ದೀಪವೂ ಜ್ಯೋತಿ ಬ್ರಹ್ಮನ ಸ್ವರೂಪವಾಗಿದೆ. ಆ ಆಧ್ಯಾತ್ಮಿಕ ಹಬ್ಬ ಭಾರತವನ್ನು ಪ್ರಕಾಶಮಾನ ಮಾಡಲಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಗೋಸ್ವಾಮಿ ತುಳುಸಿದಾಸ ಹೇಳಿದ ಮಾತನ್ನು ಹೇಳುತ್ತೇನೆ. ಶ್ರೀರಾಮ ಇಡೀ ವಿಶ್ವಕ್ಕೆ ಬೆಳಕು ನೀಡುತ್ತಾನೆ. ಈ ಪ್ರಕಾಶ ದಯಾ ಹಾಗೂ ಕರುಣೆ ಎಂದುಮೋದಿ ಹೇಳಿದ್ದಾರೆ.

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ನಾವು ಮತ್ತಷ್ಟು ಎತ್ತರಕ್ಕೆ ಹೋಗಲು ಶ್ರೀರಾಮ ಶಕ್ತಿ ನೀಡಲಿದ್ದಾರೆ. ಶ್ರೀರಾಮನ ಆಡಳಿತದಲ್ಲಿ ಸಬ್ ಕಾ ವಿಕಾಸ್ ಇತ್ತು. ಕಠಿಣ ಗುರಿಗಳನ್ನು ಮುಟ್ಟಲು ರಾಮನ ಆದರ್ಶ ಪ್ರೇರಣೆಯಾಗಲಿದೆ. ಅಯೋಧ್ಯೆಯಲ್ಲಿ ದೀಪೋತ್ಸವ ನಾವು ಸಂಕಲ್ಪ ಮಾಡಬೇಕು. ಶ್ರೀರಾಮನಿಂದ ಎಷ್ಟು ಕಲಿಯಬಹುದು, ಅದನ್ನೆಲ್ಲ ಕಲಿಯಬೇಕು. ಶ್ರೀರಾಮನನ್ನು ಮರ್ಯಾದ ಪುರುಷ ಎಂದು ಕರೆಯುತ್ತಾರೆ. ರಾಮನು ಧರ್ಮ ಮತ್ತು ಕರ್ತವ್ಯದ ಜೀವಂತ ಉದಾಹರಣೆಯಾಗಿದ್ದರು. ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಹೇಳಿದರು.

ಭಗವಾನ್ ಶ್ರೀರಾಮ ಸೀತಾ ಮಾತೆ, ಲಕ್ಷ್ಮಣರ ಸಮೇತ 14 ವರ್ಷ ವನವಾಸ ಮುಗಿಸಿ ಲಂಕೆಯಿಂದ ಅಯೋಧ್ಯೆಗೆ ಪುಷ್ಪಕ ವಿಮಾನ ಏರಿ ಬಂದ ದಿನ ಎಂದು ಪುರಾಣ ಪ್ರಸಿದ್ಧವಾಗಿರುವ ಈ ದಿನದಂದೇ ಅಯೋಧ್ಯೆಯಲ್ಲಿ ದೀಪಾವಳಿ ದೀಪೋತ್ಸವ ನಡೆದುಕೊಂಡು ಬಂದಿದೆ.

ದೀಪ ಆತ್ಮವಿಶ್ವಾಸವನ್ನು ನೀಡುತ್ತದೆ. ದೀಪ ಕತ್ತಲನ್ನು ಹೋಗಲಾಡಿಸುತ್ತದೆ. ದೀಪ ಮನುಷ್ಯನ ಮನಸ್ಸಿನಲ್ಲಿ ಸಮರ್ಪಣೆ ಬಾವ ತರುತ್ತದೆ. ದೀಪದಿಂದ ದೀಪಾವಳಿ ಭಾರತದ ಸಂಸ್ಕೃತಿಯಾಗಿದೆ. ಅದೆಷ್ಟೋ ದೀಪಾವಳಿ ಮೇಲೆ ದಾಳಿಗಳಾಗಿದೆ. ಭಾರತದ ಮೇಲೆ ಸತತ ದಾಳಿಗಳು ನಡೆದಿದೆ. ಆದರೆ ನಮ್ಮ ದೀಪಾವಳಿ, ದೀಪ ಬೆಳುಗತ್ತಲೇ ಇದೆ. ನಾವು ದೀಪವನ್ನು ಅಳಿಸಲಿಲ್ಲ. ಇತ್ತೀಚೆಗೆ ಕೊರೋನಾ ಕೂಡ ದಾಳಿ ಮಾಡಿತ್ತು. ಆದರೆ ಭಾರತದ ದೀಪ ಬೆಳಗುತ್ತಲೇ ಇತ್ತು. ದೀಪ ಹೊಸತನಕ್ಕೆ ಆರಂಭವಾಗಿದೆ. ದೀಪ ನಮ್ಮ ಆತ್ಮಿವಿಶ್ವಾಸದ ಸಂಕೇತವಾಗಿದೆ. ದೀಪ ನಮ್ಮ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯಾಗಿದೆ ಎಂದು ಮೋದಿ ಹೇಳಿದರು.

RELATED TOPICS:
English summary :Deepotsav celebration will revive ethos of cultural India, says PM Modi in Ayodhya

ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ  ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ

ನ್ಯೂಸ್ MORE NEWS...