Sat,May18,2024
ಕನ್ನಡ / English

3 ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ! ಫೋನ್ ನಲ್ಲಿತ್ತು ಬೆಚ್ಚಿಬೀಳಿಸೋ ರಹಸ್ಯ! | JANATA NEWS

02 Dec 2022
2236

ಮಂಡ್ಯ : ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ಸಂಭವಿದೆ.

ಉಸ್ನಾ ಕೌಸರ್ (30) ಎಂಬಾಕೆಯೇ ತನ್ನ ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. ಮದ್ದೂರಿನ ಹೊಳೆಬೀದಿಯಲ್ಲಿ ವಾಸವಿದ್ದ ಉಸ್ನಾ ಕೌಸರ್ ತನ್ನ ಮಕ್ಕಳಾದ ಹ್ಯಾರಿಸ್ (7), ಆಲಿಸಾ (4) ಮತ್ತು ಅನಮ್ ಫಾತಿಮಾ (2)ಮೃತ ದುರ್ದೈವಿಗಳು.

10 ವರ್ಷದ ಹಿಂದೆ ಉಸ್ನಾ ಕೌಸರ್ ಶಿವನಸಮುದ್ರಕ್ಕೆ ಟ್ರಿಪ್​ಗೆ ಹೋಗಿದ್ದಳು. ಆ ವೇಳೆ ಮದ್ದೂರಿನ ಅಖಿಲ್​ ಅಹಮದ್​ ಎಂಬಾತನೂ ಪ್ರವಾಸಕ್ಕೆ ತೆರಳಿದ್ದ. ​ಉಸ್ನಾ ಕೌಸರ್​ನನ್ನು ನೋಡಿ ಮನಸೋತ, ಪ್ರೀತಿಸಿ ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಕೂಡ ಆದ. ಅಖಿಲ್​ ಅಹಮದ್​ ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದ ಆತ ಸ್ವಂತ ಗ್ಯಾರೇಜ್​ ನಡೆಸುತ್ತಿದ್ದ. ದಂಪತಿಗೆ ಮೂರು ಮುದ್ದಾದ ಮಕ್ಕಳಿದ್ದರು. ಈ ಹಿಂದೆ ಜಯದೇವ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಉಸ್ನಾ, ಇತ್ತೀಚಿಗೆ ಮಂಡ್ಯದ ಖಾಸಗಿ ಕ್ಲಿನಿಕ್​ ನಲ್ಲಿ ಕೆಲಸ ಮಾಡುತ್ತಿದ್ದಳು.

ರಡು ತಿಂಗಳ ಹಿಂದೆ ಅಪರಿಚಿತನೊಬ್ಬ ಉಸ್ನಾಗೆ ಕಾಲ್​ ಮಾಡಿ ಕಣ್ಣೀರು ಹಾಕಿದ್ದ. ತನ್ನ ಪತ್ನಿಯೊಂದಿಗೆ ನಿನ್ನ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ನನ್ನ ಸಂಸಾರ ಹಾಳಾಗ್ತಿದೆ. ದಯವಿಟ್ಟು ನನ್ನ ಪತ್ನಿಯ ಸಹವಾಸ ಬಿಡುವಂತೆ ನಿನ್ನ ಗಂಡನಿಗೆ ಬುದ್ಧಿ ಹೇಳಿ ಎಂದಿದ್ದ.

ತನ್ನ ಗಂಡನ ಮೊಬೈಲ್​ ಫೋನ್​ ಪರಿಶೀಲಿಸಿದಾಗ ಪರಸ್ತ್ರೀಯ ಬೆತ್ತಲೆ ಚಿತ್ರ ಹಾಗೂ ಆತನ ಫೋಟೋಗಳು ಪತ್ತೆಯಾದವು, ಆಗ ಕೌಸರ್​ ಪ್ರಶ್ನೆ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಜೋರು ಗಲಾಟೆ ನಡೆದಿತ್ತು. ಮತ್ತೆ ಅಕ್ರಮ ಸಂಬಂಧ ಮುಂದುವರಿಸಿದ್ದಕ್ಕೆ ಬೇಸತ್ತ ಉಸ್ನಾ, ಗಂಡನ ಮನೆಯವರಿಗೆ ವಿಷಯ ತಿಳಿಸಿದ್ದಳು. ಅವರೆಲ್ಲೂ ಮನೆಗೆ ಬಂದು ಅಖಿಲ್​ ಅಹಮದ್​ಗೆ ಬುದ್ಧಿ ಹೇಳಿದ್ದರು. 4 ದಿನದ ಹಿಂದಷ್ಟೇ ಉಸ್ನಾಳ ತವರು ಮನೆಗೂ ಈ ವಿಚಾರ ಗೊತ್ತಾಗಿ ಗಂಡ-ಹೆಂಡತಿಯನ್ನು ತುಮಕೂರಿಗೆ ಕರೆಸಿಕೊಂಡು ರಾಜಿಪಂಚಾಯಿತಿ ಮಾಡಿ ಕಳುಹಿಸಿದ್ದರು.

ನಿನ್ನೆ ಉರುಫ್ ಹಿನ್ನೆಲೆ ಬೇಗ ಮನೆಗೆ ಬರ್ತೀನಿ ಎಂದು ಅಖಿಲ್​ ಕೆಲಸಕ್ಕೆ‌ ಹೋಗಿದ್ದ. ಆದರೆ, ಹೇಳಿದಂತೆ ಸಂಜೆ ಬೇಗ ಮನೆಗೆ ಬರಲಿಲ್ಲ. ಗಂಡನ ನಡೆಯಿಂದ ತೀವ್ರವಾಗಿ ಬೇಸತ್ತಿದ್ದ ಕೌಸರ್, ಸಂಜೆ ಮನೆಗೆ ಬಂದ ಕೌಸರ್​ ಅನ್ನದಲ್ಲಿ ಮಕ್ಕಳಿಗೆ ವಿಷ ಹಾಕಿ, ತಿನ್ನಿಸಿ, ಅವರು ಸತ್ತ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.

ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೃತಳ ತವರು ಮನೆಯವರು ಆರೋಪಿಸಿದ್ದಾರೆ. ಈ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬೆನ್ನಲ್ಲೇ ಅಖಿಲ್ ಅಹಮದ್ ಹಾಗೂ ಕುಟುಂಬ ನಾಪತ್ತೆಯಾಗಿದೆ. ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

RELATED TOPICS:
English summary :Mother committed suicide after poisoning 3 children! The secret was on the phone

ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ
ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ

ನ್ಯೂಸ್ MORE NEWS...